ನ್ಯೂಸ್

ಗಾರೆ ಕೆಲಸ ಮಾಡುವ ಪೋಷಕರ ಪುಟ್ಟ ಮಗುವಿನ ನೆರವಿಗೆ ಬಂದ ಧ್ರುವ ಸರ್ಜಾ Dhruva Sarja

ಬೆಂಗಳೂರು:( dhruva sarja) ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ನಟ  ಧ್ರುವ ಸರ್ಜಾ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಗಾರೆ ಕೆಲಸ ಮಾಡುವ ಪೋಷಕರಿಗೆ ಮಗನ ಶಸ್ತ್ರ ಚಿಕಿತ್ಸೆ ಮಾಡಿಸುವಷ್ಟು ಶಕ್ತಿ ಇರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ನಟ ಧ್ರುವ ಸರ್ಜಾ ಅವರು ಕಣ್ಣಿನಲ್ಲಿ ಪೊರೆ ಬೆಳೆದ ಬಾಲಕನ ಟ್ರೀಟ್ಮೆಂಟ್‌ಗೆ ಸಹಕರಿಸಿದ್ದಾರೆ.

ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ಧ್ರುವ ಸಹಕರಿಸಿದ್ದಾರೆ. ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತಿದ್ದಾರೆ.

ಇದೀಗ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನಟ ಧ್ರುವ ಸರ್ಜಾ ಅವರು ವಿಡಿಯೋ ಕಾಲ್ ಮಾಡೋ ಮೂಲಕ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.