ಧ್ಯಾನ್​ ಚಿತ್ರಕ್ಕೆ ಕ್ಲಾಪ್ ಮಾಡಿದ ಸಿಎಂ 
ನ್ಯೂಸ್

ಧ್ಯಾನ್ ಯೋಗೇಶ್ವರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ : ‘ಕರ್ಣಾಟಬಲಂ’, ‘ಸೈನಿಕ 2’ ಚಿತ್ರಗಳಿಗೆ ಮುಹೂರ್ತ

ಪ್ರಮುಖ ಮುಖ್ಯಾಂಶಗಳು

  • ಸಿ.ಪಿ.ಯೋಗೇಶ್ವರ ಪುತ್ರನ ಎರಡು ಚಿತ್ರಗಳಿಗೆ ಮುಹೂರ್ತ
  • ಸೆಟ್ಟೇರಿದ ಸೈನಿಕ 2, ಕರ್ಣಾಟಬಲಂ ಸಿನಿಮಾಗಳು
  • ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿ, ಯುವ ನಟಿನಿಗೆ ಶುಭ ಹಾರೈಕೆ
ಬೆಂಗಳೂರು: ನಟ, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಪುತ್ರ ಧ್ಯಾನ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ನಟನೆಯ ‘ಕರ್ಣಾಟಬಲಂ: ಅಜೇಯಂ’ ಮತ್ತು ‘ಸೈನಿಕ 2’ ಚಿತ್ರಗಳಿಗೆ ಭಾನುವಾರ ಮುಹೂರ್ತ ನೆರವೇರಿಸಲಾಗಿದೆ. ಈ ಎರಡು ಚಿತ್ರದಲ್ಲಿ ಧ್ಯಾನ್ ಜತೆ ಸಿ.ಪಿ.ಯೋಗೇಶ್ವರ ಕೂಡ ಅಭಿನಯಿಸುತ್ತಿರುವುದು ವಿಶೇಷ. ಇನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿ, ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ, ‘ಚಿತ್ರರಂಗಕ್ಕೆ ಶಕ್ತಿ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸುತ್ತಿದೆ. ಇತ್ತೀಚಿನ ದಿನಗಳ ಕನ್ನಡದ ಐದಾರು ಸಿನಿಮಾಗಳು ಬಾಲಿವುಡ್‌ನ್ನು ಟೇಕ್ ಓವರ್ ಮಾಡಿವೆ. ಶಾಸಕ ಸಿ.ಪಿ.ಯೋಗೇಶ್ವರ್ ಕುಟುಂಬ ಸಾಹಸಕ್ಕಿಳಿದಿದೆ. ಶ್ರಮ ಇದ್ದಲ್ಲಿ ಖಂಡಿತ ಫಲ ಇದ್ದೆ ಇದೆ.ನಾಯಕ ಧ್ಯಾನ್ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಬೆಳೆಯಲಿ’ ಎಂದು ಶುಭ ಹಾರೈಸಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಸುಧಾಕರ್ ಸೇರಿ ಹಲವರಿದ್ದರು. ಸಿ.ಪಿ.ಯೋಗೇಶ್ವರ, ‘ಚಿತ್ರೋದ್ಯಮ ಸೊರಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಅಗತ್ಯವಾಗಿ ಚಿತ್ರೋದ್ಯಮದ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡುವೆ. 40 ವರ್ಷಗಳ ಹಿಂದೆ ನಟನಾಗಬೇಕೆಂದು ಬೆಂಗಳೂರಿಗೆ ಬಂದಿದ್ದೆ. ಮುಂದೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಹೋಗಬೇಕಾಯಿತು. ಸಿನಿಮಾ ನನ್ನ ಕನಸುಗಳನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳಬೇಕೆಂಬ ಆಸೆಯಲ್ಲಿದ್ದೇನೆ. ಮಣ್ಣಿನ ಕಥೆಗಳು ಹೆಚ್ಚು ಬರಬೇಕು ಎಂಬುದು ನನ್ನ ಆಶಯ’ ಎಂದರು.‘ಕರ್ಣಾಟಬಲಂ’ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದು, ‘ಸೈನಿಕ 2’ ಚಿತ್ರಕ್ಕೆ ಪುನೀತ್ ರುದ್ರಾಂಗ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಶೀಲಾ ಯೋಗೇಶ್ವರ್ ಬಂಡವಾಳ ಹೂಡಿದ್ದಾರೆ. ‘ಕರ್ಣಾಟಬಲಂ’ ಚಿತ್ರದಲ್ಲಿ ಧ್ಯಾನ್ ಜತೆಗೆ ಬಾಲಿವುಡ್‌ನ ಮಣಿಕಾ ಶರ್ಮಾ, ರೇಖಾ ಪಾಂಡೆ, ಜಗಪತಿ ಬಾಬು ಕಲಾಬಳಗದಲ್ಲಿದ್ದಾರೆ. ಈ ಚಿತ್ರ ಮುಂದಿನ ಸಂಕ್ರಾಂತಿಗೆ ತೆರೆಗೆ ಬರಲು ನಿರ್ಧರಿಸಿದೆ.