ನ್ಯೂಸ್

"ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ" : ವೀರೇಂದ್ರ ಹೆಗ್ಗಡೆ..Veerendra Heggade

ಬೆಂಗಳೂರು:  ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಆರೋಪ ಮಾಡಿದ್ದ ಮಾಸ್ಕ್​ಮ್ಯಾನ್​​ನನ್ನು ಇದೀಗ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದು, 10 ದಿನಗಳ ಕಾಲ ಎಸ್‌ ಐಟಿ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಈ ಪ್ರಕರಣ ಹಿನ್ನಲೆ ಕೆಲವರನ್ನು ಈಗಾಗಲೇ ತನಿಖಾ ತಂಡ ವಿಚಾರಣೆಗೆ ಒಳಪಡಿಸಿದೆ.  ಈ ಎಲ್ಲ ಬೆಳವಣಿಗೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ( Veerendra Heggade )  ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, "ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು, ಈ ಬಗ್ಗೆ ಹೆಚ್ಚು ಮಾತನಾಡಲ್ಲ .  ಎಸ್ಐಟಿ ತನಿಖೆಯ  ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸುವ  ಎಲ್ಲರಿಗೂ ಧನ್ಯವಾದಗಳು. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ, ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ.  ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸ್ತೇನೆ ಎಂದಿದ್ದಾರೆ.

ಪ್ರಕರಣ ಹಿನ್ನೆಲೆ:

ಕೆಲವು ದಿನಗಳ ಹಿಂದೆ ಬಂದು ಬುರುಡೆ ತಂದು, ಪೊಲೀಸರಿಗೆ, ಕೋರ್ಟ್​​ಗೆ ಕೊಟ್ಟ. ನಾನು ಧರ್ಮಸ್ಥಳ ಸುತ್ತಮುತ್ತ ಅಕ್ರಮವಾಗಿ ಶವ ಹೂತಿದ್ದೇನೆ ಎಂದು  ಮಾಸ್ಕ್ ಮ್ಯಾನ್  ಚಿನ್ನಯ್ಯ ಆರೋಪ ಮಾಡಿದ್ದನು. ಆದಾದ ಬಳಿಕ ಆತ ತೋರಿಸಿದ 15 ಜಾಗದಲ್ಲಿ ಅಗೆದರೂ ಆತ ಹೇಳಿದಂತೆ ನೂರಾರು ಶವಗಳ ಅಸ್ಥಿಪಂಜರಗಳು ಸಿಗಲಿಲ್ಲ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು  ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚಿನ್ನನ ಈಗಿನ ಲೇಟೆಸ್ಟ್ ಫೋಟೋ ಕೂಡ ಬಿಡುಗಡೆಯಾಗಿದೆ.

ಮಾಸ್ಕ್ ಮ್ಯಾನ್ ಇಷ್ಟು ದಿನ ನೂರಾರು ಶವ ಹೂತ್ತಿದ್ದೆ ಎಂದು ಪೊಲೀಸರಿಗೆ ದೂರು  ನೀಡಿದ್ದರಿಂದ ದೂರುದಾರ ಹಾಗೂ ಕೇಸ್ ಸಾಕ್ಷಿದಾರನಾಗಿದ್ದ. ಆದರೇ, ಈತ ಹೇಳಿದಂತೆ ಹೇಳಿದಂತೆ ನೂರಾರು ಶವಗಳ ಅಸ್ಥಿಪಂಜರಗಳು ಸಿಗಲಿಲ್ಲ. ಈಗ ಸಾಕ್ಷಿ, ದೂರುದಾರನೇ ಆರೋಪಿಯಾಗಿದ್ದಾನೆ. ಪೊಲೀಸರಿಗೆ ಸುಳ್ಳು ದೂರು ಕೊಡುವುದು ಕೂಡ ಅಪರಾಧ. ಹೀಗಾಗಿ ಚಿನ್ನಯ್ಯ ಅಲಿಯಾಸ್ ಚಿನ್ನನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇದೀಗ 10 ದಿನ ಕಸ್ಟಡಿಗೆ  ತೆಗೆದುಕೊಂಡಿದ್ದಾರೆ.

ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಬಂಧಿಸಿದೆ. ಮತ್ತೊಂದೆಡೆ ಮಹೇಶ್ ಶೆಟ್ಟಿ ತಿಮ್ಮರೋಡಿರನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.