ನ್ಯೂಸ್

ಮಾವ ರಜನಿಕಾಂತ್ ಮನೆ ಪಕ್ಕದಲ್ಲೇ ಬಂಗಲೆ ಖರೀದಿಸಿದ ಧನುಷ್; ಚರ್ಚೆಗೆ ಗ್ರಾಸವಾಯ್ತು ಕೋಟಿ..ಕೋಟಿ ಬೆಲೆ ಬಾಳುವ ವಿಲ್ಲಾ

ನವದೆಹಲಿ: ತಮಿಳು ನಟ ಧನುಷ್  ಚೆನ್ನೈನ ಪೋಯಸ್ ಗಾರ್ಡನ್​​ನಲ್ಲಿ ಭವ್ಯ ಬಂಗಲೆ ಖರೀದಿ ಮಾಡಿದ್ದಾರೆ.ಈ ಬಂಗಲೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸುಮಾರು 150 ಕೋಟಿ ರೂಪಾಯಿ ಮೌಲ್ಯದ ಈ ಬಂಗಲೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿವಾಸದ ಬಳಿ ಇದೆ. ಈ ಬಂಗಲೆ ಖರೀದಿಸಿರುವ ಬೆನ್ನಲ್ಲೇ ನಟ ಧನುಷ್​​ ಅವರು ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದಾರೆ. ಚೆನ್ನೈನ ಶ್ರೀಮಂತ ಏರಿಯಾದಲ್ಲಿ ಅವರು ಮನೆ ಹೊಂದಿದ್ದಾರೆಂದು ಟ್ರೋಲ್​ ಮಾಡಲಾಗಿತ್ತು.

ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಿರುವ ಕುರಿತು ನಟ ಧನುಷ್ 'ರಾಯಣ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಮನೆ ಖರೀದಿಯೂ ಚರ್ಚೆಗೆ ಗ್ರಾಸವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಭಾಗದಲ್ಲಿ ಮನೆ ಬೇಕು ಎಂಬುದು ಮೊದಲಿನಿಂದಲೂ ಕನಸಾಗಿತ್ತು . ಪೋಯಸ್‌ಗಾರ್ಡನ್‌ನಲ್ಲಿ ಮನೆ ಖರೀದಿಸುವುದು ಇಷ್ಟೊಂದು ಹಾಟ್ ಟಾಪಿಕ್ ಆಗುತ್ತೆ ಅಂತ ಗೊತ್ತಿದ್ದಿದ್ದರೆ ಬದಲಿಗೆ ನಾನು ಒಂದು ಸಣ್ಣ ಅಪಾರ್ಟ್ಮೆಂಟ್ ಅನ್ನು ಖರೀದಿ ಮಾಡುತ್ತಿದ್ದೇನು. ನನ್ನಂತಹ ವ್ಯಕ್ತಿ ಪೋಯಸ್ ಗಾರ್ಡನ್‌ನಲ್ಲಿರುವ ಮನೆ ಖರೀದಿಸಬಾರದು. ,ಬೀದಿಯಲ್ಲಿ ಜನಿಸಿದವರು ತಮ್ಮ ಜೀವನ ಕೊನೆಯವರೆಗೂ ಅಲ್ಲಿಯೇ ಇರಬೇಕೇ? ಎಂದು ಪ್ರಶ್ನಿಸಿದ್ದಾರೆ.

ಮನೆ ಖರೀದಿಸುವುದರ ಹಿಂದೆ ಒಂದು ಸಣ್ಣ ಕಥೆಯಿದೆ. ನಾನು 16ನೇ ವಯಸ್ಸಿನಲ್ಲಿದ್ದಾಗ ಪೋಯಸ್​ ಗಾರ್ಡನ್​ನಲ್ಲಿ ಓಡಾಡುತ್ತಿದ್ದೆ. ರಜನಿಕಾಂತ್ ಮನೆ, ಜಯಲಲಿತಾ ಮನೆ ಎಂದು ಜನರು ಹೇಳುತ್ತಿದ್ದರು. ಮುಂದೊಂದು ದಿನ ನಾನು ಕೂಡ ಈ ಏರಿಯಾದಲ್ಲಿ ಒಂದು ಚಿಕ್ಕ ಮನೆಯನ್ನಾದರೂ ಕೊಂಡುಕೊಳ್ಳಬೇಕು ಅಂತ ತೀರ್ಮಾನಿಸಿದ್ದೇನು. ನಾನು ಬಾಲ್ಯದಲ್ಲಿ ಒಮ್ಮೆ  ಪೋಯಸ್ ಗಾರ್ಡನ್‌ಗೆ ಹೋಗಿದ್ದೆ. ಜಯಲಲಿತಾ ಅವರ ಮನೆಯೂ ಇದೇ ಪ್ರದೇಶದಲ್ಲಿದೆ ಎಂದು ತಿಳಿದು ಆಶ್ಚರ್ಯವಾಯಿತು. ಖಂಡಿತಾ ಮುಂದೊಂದು ದಿನ ಈ ಏರಿಯಾದಲ್ಲಿ ಮನೆ ಖರೀದಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಿಮ್ಮ ಕುಟುಂಬದವರು ಚಿತ್ರರಂಗದಲ್ಲಿ ಇದ್ದರು. ಹಾಗಾಗಿ, ಪ್ರತಿಭೆ ಇಲ್ಲದಿದ್ದರೂ ಸುಲಭವಾಗಿ ನಿಮಗೆ ಅವಕಾಶ ಸಿಕ್ಕಿದೆ. ಬೀದಿಯಲ್ಲಿ ಇದ್ದೆ ಅಂತ ನೀವು ಹೇಳಿದ್ದೀರಿ. ಬೀದಿ ಹೇಗಿರುತ್ತದೆ ಎಂಬುದು ನಿಮಗೆ ಗೊತ್ತಾ? ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಧನುಷ್ ಅವರ ಸ್ವಯಂ ನಿರ್ದೇಶನದ ಚಿತ್ರ 'ರಾಯಣ್'. ಇದು ಅವರ 50ನೇ ಚಿತ್ರ. ಸೆಲ್ವರಾಘವನ್, ಪ್ರಕಾಶ್ರಾಜ್ ಮತ್ತು ಸಂದೀಪ್ ಕಿಶಾನ ಪ್ರಮುಖ ನಟರು  ಇದ್ದಾರೆ. ಆಕ್ಷನ್ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಕಲಾನಿಧಿ ಮಾರನ್ ಅವರು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರೂ.100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಜುಲೈ 26 ರಂದು ಚಿತ್ರ ತೆರೆಗೆ ಬರಲಿದೆ.