ನ್ಯೂಸ್

ಡಿಜಿಪಿ ಡಾ.ಪಿ.ರವೀಂದ್ರನಾಥ್ ನಿವೃತ್ತಿ

ಮಂಜುನಾಥ.ಕೆ

ಬೆಂಗಳೂರು: 35 ವರ್ಷಗಳ ಪೊಲೀಸ್‌ನ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರು ಶನಿವಾರ ನಿವೃತ್ತರಾದರು.
ಹೈದಾರಬಾದ್ ಮೂಲದ ಡಾ.ಪಿ.ರವೀಂದ್ರನಾಥ್ ಅವರು, ವಿವಿಧ ಜಿಲ್ಲೆಗಳ ಎಸ್.ಪಿಯಾಗಿ ಮೈಸೂರು ಕಮೀಷನರ್ ಆಗಿ, ಆಡಳಿತ ವಿಭಾಗದ ಐಜಿಪಿಯಾಗಿ, ಅಬಕಾರಿ ಇಲಾಖೆಯ ಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಂಡಿದ್ದೇನೆ ಸಮಸ್ಯೆಗಳನ್ನು ಎದುರಿಸಿದ್ದೇನೆ. ಕರ್ನಾಟಕ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಬಹುದು. ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳು ತೋರಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಮಾಧ್ಯಮ ಮಿತ್ರರು ಸಹ ನನಗೆ ಅತ್ಯಂತ ಪ್ರೀತಿ ತೋರಿದ್ದಾರೆ ಎಲ್ಲರಿಗೂ ನಾನು ಋಣಿಯಾಗಿದ್ದೇನೆ ಎಂದು ವಿಜಯವಾಣಿಗೆ ಡಾ.ಪಿ.ರವೀಂದ್ರನಾಥ್ ತಿಳಿಸಿದ್ದಾರೆ.