ನ್ಯೂಸ್

ಜಂತುಹುಳು ನಿವಾರಣೆ ಅಭಿಯಾನ

ವಸಂತಕುಮಾರ್ ಬಿ

ಹನಗೋಡು: ಜಂತುಹುಳು ಮಾತ್ರೆ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. 1 ರಿಂದ 19ವರ್ಷದೊಳಗಿನ ಎಲ್ಲರೂ ಮಾತ್ರೆ ಸೇವಿಸಿ ಜಂತುಹುಳುವಿನಿಂದ ಪಾರಾಗಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಂಜಪ್ಪ ಸಲಹೆ ನೀಡಿದರು.

ಹನಗೋಡು ಹೋಬಳಿಯ ಚಿಲ್ಕುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಅಭಿಯಾನದ ನಿಮಿತ್ತ ಗ್ರಾಮದ ಮನೆಗಳ ಬಳಿಗೆ ತೆರಳಿ ಜಂತುಹುಳು ಮಾತ್ರೆಗಳನ್ನು ವಿತರಿಸಿ ಮಾತನಾಡಿದರು.

ಜಂತುಹುಳು ಕಾಟದಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಲಿದೆ. ಅಲ್ಲದೆ ಹಲವು ರೋಗಗಳಿಗೂ ಕಾರಣವಾಗಲಿದೆ. ಆರೋಗ್ಯ ಇಲಾಖೆ ಸೂಚನೆಯಂತೆ ಒಂದು ವರ್ಷದಿಂದ 19 ವರ್ಷದೊಳಗಿನ ಮನೆ ಮನೆಗೆ ತೆರಳಿ ಗುಳಿಗೆಗಳನ್ನು ವಿತರಿಸಲಾಗುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿಲ್ಕುಂದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ರವಿಕುಮಾರ್ ಮಾರ್ಗದರ್ಶನದಲ್ಲಿ ಆಸ್ಪತ್ರೆ ವ್ಯಾಪ್ತಿಯ 9 ಗ್ರಾಮಗಳಲ್ಲೂ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರಪತ್ರ ಹಾಗೂ ಮಾತ್ರೆಗಳನ್ನು ವಿತರಿಸಿದರು. ಈ ವೇಳೆ ಆಶಾ ಕಾರ್ಯಕರ್ತೆ ಸುಮಾ ಇದ್ದರು.