ಅರ್ಚಕ ಶಿವರುದ್ರಚಾರ್ ನೇತೃತ್ವದಲ್ಲಿ ಭಕ್ತರು ಮದ್ದೂರು ನಗರದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಸಿದ್ದರಾಜು, ಪ್ರಕಾಶ್, ಮಹದೇವ, ಧರ್ಮಪ್ಪ, ಮಂಜು, ಜಯರಾಮು, ದೀಪು, ಶ್ರೀನಿವಾಸ್, ರಾಮಕೃಷ್ಣ ಇದ್ದರು. 
ನ್ಯೂಸ್

ಲೋಕ ಕಲ್ಯಾಣಕ್ಕಾಗಿ ಭಕ್ತರಿಂದ ಬೆಟ್ಟಕ್ಕೆ ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ರಾಜೇಗೌಡನದೊಡ್ಡಿ ಅರ್ಚಕ ಶಿವರುದ್ರಾಚಾರ್ ಮಾಹಿತಿ
ಮದ್ದೂರು: ಲೋಕ ಕಲ್ಯಾಣಕ್ಕಾಗಿ 3 ವರ್ಷಗಳಿಂದ ಭಕ್ತರು ಪಾದಯಾತ್ರೆ ಮೂಲಕ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ರಾಜೇಗೌಡನದೊಡ್ಡಿ ಅರ್ಚಕ ಶಿವರುದ್ರಾಚಾರ್ ತಿಳಿಸಿದರು.
ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ನಗರದ ಶ್ರೀ ಗಣೇಶನ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ ಅವರು, ಲೋಕ ಕಲ್ಯಾಣ, ರೈತರು, ಸೈನಿಕರು, ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ 3 ವರ್ಷಗಳಿಂದ ಸತತವಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡಿ.11 ರಂದು ಪಾದಯಾತ್ರೆ ಹೊರಡಲಾಗಿದ್ದು, ದೇವರ ದರ್ಶನ ಪಡೆದು ಡಿ.14 ರಂದು ಹಿಂದಿರುಗಲಾಗುವುದು. ಸುಮಾರು 40 ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ನಗರಸಭಾ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಅರ್ಚಕ ಶಿವರುದ್ರಚಾರ್ ನೇತೃತ್ವದಲ್ಲಿ ಹಲವು ವರ್ಷಗಳಿಂದ ಪಾದಯಾತ್ರೆ ಮೂಲಕ ಭಕ್ತರು ಬೆಟ್ಟಕ್ಕೆ ಹೋಗುತ್ತಿದ್ದರೆ ಎಂದರು.
ಇದಕ್ಕೂ ಮುನ್ನ ರಾಜೇಗೌಡನದೊಡ್ಡಿಯಿಂದ ಪಾದಯಾತ್ರೆ ಮೂಲಕ ತೊಪ್ಪನಹಳ್ಳಿಯ ಶ್ರೀ ಮಲೆ ಮಹದೇಶ್ವರಸ್ವಾಮಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಗರಕ್ಕೆ ಆಗಮಿಸಿ ಬೆಟ್ಟಕ್ಕೆ ತೆರಳಿದರು. ನಗರಸಭಾ ಮಾಜಿ ಸದಸ್ಯ ಸಿದ್ದರಾಜು, ಭಕ್ತಾಧಿಗಳಾದ ಪ್ರಕಾಶ್, ಮಹದೇವ, ಧರ್ಮಪ್ಪ, ಮಂಜು, ಜಯರಾಮು, ದೀಪು, ಶ್ರೀನಿವಾಸ್, ರಾಮಕೃಷ್ಣ ಇದ್ದರು.