ನ್ಯೂಸ್

ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಮೂಲದ ಭಕ್ತ!

ಶಿರಡಿ: ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾಗೆ ಲಕ್ಷಾಂತರ ರೂ. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಇಂಗ್ಲೆಂಡ್​ ಮೂಲದ ಭಕ್ತರೊಬ್ಬರು ಕಾಣಿಕೆಯಾಗಿ ಅರ್ಪಿಸಿ ಭಕ್ತಿಯ ಪರಾಕಷ್ಟೆ ಮೆರೆದಿದ್ದಾರೆ.

ಚಿನ್ನ-ವಜ್ರದ ಕಿರೀಟ, ಹಾರಗಳನ್ನು ತಿರುಪತಿ ತಿಮ್ಮನಿಗೆ ಅರ್ಪಿಸುವಂತೆ ಶಿರಡಿ ಸಾಯಿಬಾಬಾಗೂ ಭಕ್ತರು ಕಾಣಿಕೆ ನೀಡುತ್ತಲೇ ಇದ್ದಾರೆ. ಆರತಿ ಸಮಯದಲ್ಲಿ ಸಾಯಿಬಾಬಾಗೆ ಕಿರೀಟ ತೊಡಿಸಿ ಪೂಜಿಸುವುದು ವಾಡಿಕೆ. ಈ ಹಿಂದೆ ಬೆಳ್ಳಿ ಕಿರೀಟ ತೊಡಿಸಲಾಗುತ್ತಿತ್ತು. ಕೆಲ ವರ್ಷದ ಹಿಂದೆ ಚಿನ್ನದ ಕಿರೀಟಧಾರಣೆ ಮಾಡಲಾಯಿತು. ಹಲವು ಭಕ್ತರು ಬೆಳ್ಳಿ-ಚಿನ್ನದ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಇದೀಗ ಇಂಗ್ಲೆಂಡ್​ ಮೂಲದ ಕನಾರಿ ಸುಬಾರಿ ಪಟೇಲ್​ ಎಂಬುವವರು ವಜ್ರಖಚಿತ ಚಿನ್ನದ ಕಿರೀಟವನ್ನು ಸಾಯಿಬಾಬಾ ಟ್ರಸ್ಟ್​ಗೆ ಅರ್ಪಿಸಿದ್ದಾರೆ. ಕನಾರಿ ಸುಬಾರಿ ಪಟೇಲ್​ ಅವರು ಸಾಯಿಬಾಬಾರ ಪರಮ ಭಕ್ತ. ಹಾಗಾಗಿ ನೆಚ್ಚಿನ ದೈವ ಸಾಯಿಬಾಬಾಗೆ ವಜ್ರದ ಕಿರೀಟವನ್ನು ಸಮರ್ಪಿಸಿದ್ದಾರೆ. ಇದರ ಬೆಲೆ 28 ಲಕ್ಷ ರೂಪಾಯಿ. (ಏಜೆನ್ಸೀಸ್​)