ನ್ಯೂಸ್

ಹೊನ್ನಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆ. 22ರಂದು

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ಗುಡಿಹೊನ್ನತ್ತಿಯ ಹೊನ್ನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆ. 23ರಂದು ಬೆಳಗ್ಗೆ 11 ಗಂಟೆಗೆ ಬಸವೇಶ್ವರಸ್ವಾಮಿ, ದುರ್ಗಾದೇವಿ, ಹಳೆ ಹೊನ್ನತ್ತಿಯ ಹೊನ್ನಮ್ಮದೇವಿ ಪಾದಗಟ್ಟಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ವಸತಿಗೃಹಗಳ ಉದ್ಘಾಟನೆ ಸಮಾರಂಭ ಮತ್ತು ಧರ್ಮಸಭೆಯು ಜರುಗಲಿದೆ.
ಚೌಡಯ್ಯದಾನಪುರದ ಒಡೆಯರ ಚಿತ್ರಶೇಖರ ಸ್ವಾಮೀಜಿ, ನೆಗಳೂರಿನ ಗುರು ಶಾಂತೇಶ್ವರ ಸ್ವಾಮೀಜಿ, ಹೂವಿನಹಡಗಲಿಯ ಸಿದ್ಧನಂದೀಶ್ವರ ಸ್ವಾಮೀಜಿ, ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ, ನರಸೀಪುರದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಬಣಕಾರ ಅಧ್ಯಕ್ಷತೆ ವಹಿಸುವರು. ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.