ಸಾಗರ: ಶಾಸಕಾಂಗ ಮತ್ತು ಕಾರ್ಯಾಂಗ ಸಮನ್ವಯದಿಂದ ಉತ್ತಮವಾಗಿ ಕೆಲಸ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ವಿನೋಬನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆಯ ನೂತನ ನೆಲಮಹಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖ ಎಂದರು.
ಕಟ್ಟಡದ ಉಳಿದ ಕಾಮಗಾರಿಗೆ ಬೇಕಾದ ಅನುದಾನ ನಾನು ಕೊಡುತ್ತೇನೆ. ಭವನದಲ್ಲಿ ಸರ್ಕಾರಿ ನೌಕರರ ಕುಟುಂಬಗಳಿಗೆ ಶುಭಕಾರ್ಯ ನಡೆಸಲು ಅವಕಾಶ ಕಲ್ಪಿಸಬೇಕು. ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ಲ್ಲರಿಗೂ ಸಿಗಲ್ಲ. ಹಾಗಾಗಿ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಭವನದ ನೆಲಮಹಡಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಅನುದಾನ ನೀಡಿದ ಚುನಾಯಿತ ಪ್ರತಿನಿಧಿಗಳ ಸಹಕಾರ ಸ್ಮರಿಸಬೇಕು.ಗೋಪಾಲಕೃಷ್ಣ ಬೇಳೂರುಶಾಸಕ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ತಾಲೂಕು ಶಾಖೆ ಪದಾಧಿಕಾರಿಗಳು ನೂತನ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ. ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಮಾಡಿದಾಗ ಸರ್ಕಾರದ ಮನವೊಲಿಸಿ 1.50 ಕೋಟಿ ರೂ. ಅನುದಾನ ಕೊಡಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ನೌಕರರ ತಾಲೂಕು ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಎಸಿ ಆರ್.ಯತೀಶ್, ತಾಪಂ ಇಒ ಗುರುಕೃಷ್ಣ ಶೆಣೈ, ಮೋಹನ್‌ಕುಮಾರ್, ಪಾಪಣ್ಣ, ಕೆ.ಪ್ರಸನ್ನ, ಟಿ.ವಿ.ಸತೀಶ್, ಬಸವಣ್ಯಪ್ಪ, ಮಾಲತೇಶಪ್ಪ, ವಿ.ಚಂದ್ರಶೇಖರ್, ಲಕ್ಷ್ಮೀ ಭಾಗವತ್, ರಾಘವೇಂದ್ರ ಕುಮಾರ್, ಡಿ.ಕೆ.ಅಣ್ಣಪ್ಪ, ಸೋಮಪ್ಪ, ಲಕ್ಷ್ಮಣ್ ನಾಯಕ್ ಇತರರಿದ್ದರು.