ರಾಣೆಬೆನ್ನೂರ: ಭವ್ಯ ಭಾರತದ ಉತ್ತಮ ಭವಿಷ್ಯಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳ ಪಾತ್ರವು ಅವಶ್ಯಕವಾಗಿದೆ. ಸಾಮಾಜಿಕ, ಆಥಿರ್ಕ, ಶೈಕ್ಷಣಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಸುಧಾರಣೆಯಲ್ಲಿ ಕೇಂದ್ರ ಸರ್ಕಾರದ ಅನೇಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಎಸ್ಜೆಎಂವಿ ಬಿಎಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾಥಿರ್ಗಳ ಸಂಘ ಹಾಗೂ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಪರಿಷತ್ ವತಿಯಿಂದ ಬುಧವಾರ ಏರ್ಪಡಿಸಿದ್ದ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಭಾರತದ ಕೌಶಲ, ಸಮಸ್ಯೆಗಳು, ಸವಾಲುಗಳು ಹಾಗೂ ಮುಂದಿನ ದಾರಿ ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಡವರಿಗೆ, ದೀನದಲಿತರಿಗೆ, ಮಹಿಳೆಯರಿಗೆ ಹಾಗೂ ಅಲ್ಪ ಸಂಖ್ಯಾತರಿಗೆ ಪೂರಕವಾಗುವ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅವುಗಳ ಫಲಶೃತಿಯಲ್ಲಿ ಇಂತಹ ವಿಚಾರ ಸಂಕಿರಣಗಳ ಅಂಶಗಳು ಮೈಲುಗಲ್ಲಾಗಿವೆ ಎಂದರು.
ಪ್ರಾಚಾರ್ಯ ಡಾ. ಆರ್.ವಿ. ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಅಧಿವೇಶನದಲ್ಲಿ 26 ಪ್ರತಿನಿಧಿಗಳು ತಮ್ಮ ಸಂಶೋಧನಾ ಲೇಖನ ಮಂಡಿಸಿದರು.
ಹಾವೇರಿ ವಿಶ್ವ ವಿದ್ಯಾಲಯದ ರಜಿಸ್ಟಾರ್ ಡಾ. ಎಸ್.ಟಿ. ಬಾಗಲಕೋಟಿ, ಡಾ. ಅನಿಲಕುಮಾರ, ಬಿ.ಆರ್. ಡಮ್ಮಳ್ಳಿ, ಡಾ. ಶರತ ಕುಮಾರ, ಡಾ. ಕೆ.ಬಿ. ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.