ರೋಮ್: ಜಗತ್ತಿನ ದೊಡ್ಡ ಅರ್ಥವ್ಯವಸ್ಥೆಯ ನಾಯಕರು ಜಿ-20 ಶೃಂಗದ ಎರಡನೇ ಮತ್ತು ಕೊನೆಯ ದಿನ ಹವಾಮಾನ ವೈಪರೀತ್ಯದ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಾತನಾಡಿದರು. ಸ್ಕಾಟ್ಲೆಂಡ್ನ ಗ್ಲಾಸ್ಗೋವ್ನಲ್ಲಿ ಸಿಒಪಿ 26 ಶೃಂಗ ಶುರುವಾಗಿದ್ದು, ಮುಂದಿನ ಎರಡು ವಾರಗಳ ವಿವಿಧ ರಾಷ್ಟ್ರಗಳ ನಾಯಕರು ಹವಾಮಾನ ವೈಪರೀತ್ಯ ತಡೆಗೆ ತೆಗೆದುಕೊಂಡ ಕ್ರಮಗಳ ವಿವರವನ್ನು ಜಗತ್ತಿನೆದುರು ಪ್ರಸ್ತುತಪಡಿಸಲಿದ್ದಾರೆ. ಜಗತ್ತಿನ ಹಸಿರು ಅನಿಲ ಹೊರಸೂಸುವಿಕೆಯ ನಾಲ್ಕನೇ ಮೂರಂಶದಷ್ಟು ಹೊಂದಿರುವ ಜಿ&20 ರಾಷ್ಟ್ರಗಳು, ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಬಡ ರಾಷ್ಟ್ರಗಳಿಗೆ ನೆರವಾಗುತ್ತ, ತಮ್ಮ ದೇಶಗಳಲ್ಲಿ ಮಾಲಿನ್ಯ ತಡೆಗೆ ಹೇಗೆ ಎಲ್ಲರಿಗೂ ಹೊಂದುವಂತಹ ಕ್ರಮ ತೆಗೆದುಕೊಳ್ಳುವುದು ಎಂಬ ಬಗ್ಗೆ ಚಿಂತನೆ ನಡೆಸಿವೆ.
ಜಿ-20 ಶೃಂಗದಲ್ಲಿ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಶೇ.15 ಗ್ಲೋಬಲ್ ಮಿನಿಮಂ ಟ್ಯಾಕ್ಸ್ ವಿಧಿಸುವ ವಿಚಾರ, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡುವುದು, ಹಸಿರು ಅನಿಲ ಹೊರಸೂಸುವಿಕೆ ಕಡಿಮೆ ಮಾಡುವುದು ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಿವೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲು ನಿರ್ಧಾರ ಮಾಡಿದೆ. ಚೀನಾ ಕೂಡ ಕಲ್ಲಿದ್ದಲು ಯೋಜನೆಗೆ ನೆರವು ಕೊನೆಗೊಳಿಸುವುದಾಗಿ ಘೋಷಿಸಿದೆ. ಜಪಾನ್, ದಣ ಕೊರಿಯಾಗಳು ಕೂಡ ಈ ಕುರಿತು ಬದ್ಧತೆಯನ್ನು ತೋರಿಸಿವೆ. ಆದಾಗ್ಯೂ, ಸ್ವದೇಶದಲ್ಲಿ ಕಲ್ಲಿದ್ದಲು ಯೋಜನೆ ಕೊನೆಗೊಳಿಸಲು ಡೆಡ್ಲೈನ್ ಹಾಕಿಕೊಂಡಿಲ್ಲ. ವಿದ್ಯುತ್ ಉತ್ಪಾದನೆಗೆ ಚೀನಾ ಕಲ್ಲಿದ್ದಲು ಟಕಗಳನ್ನೇ ಮುಖ್ಯ ಮೂಲವಾಗಿ ನಂಬಿಕೊಂಡಿದೆ. ಭಾರತದಲ್ಲೂ ಅಷ್ಟೆ ವಿದ್ಯುತ್ ಉತ್ಪಾದನೆಯ ಪ್ರಮುಖ ಟಕಗಳು ಕಲ್ಲಿದ್ದಲು ಟಕಗಳೇ ಆಗಿವೆ.
ಚೀನಾ ಸೇರಿ ಪ್ರಮುಖ ರಾಷ್ಟ್ರಗಳು ಕಲ್ಲಿದ್ದಲು ಯೋಜನೆ ಸ್ಥಗಿತಗೊಳಿಸುವ ವಿಚಾರದಲ್ಲಿ ಬದ್ಧತೆ ತೋರಿಸಬೇಕು. ಗ್ಲಾಸ್ಗೋವ್ನಲ್ಲಿ ಈ ಬಗ್ಗೆ ಘೋಷಣೆ ಮಾಡಿ ಪರಿಸರ ಸ್ನೇಹಿ ಇಂಧನ ಬಳಕೆ ಕಡೆಗೆ ಗಮನಹರಿಸಬೇಕು.| ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ
2030ಕ್ಕೆ 1.5 ಡಿಗ್ರಿ ಸೆಲ್ಷಿಯಸ್
ತಾಪಮಾನವನ್ನು 1.5 ಡಿಗ್ರಿ ಸೆಲ್ಷಿಯಸ್ಗೆ ಮಿತಿಗೊಳಿಸಲು 2015ರ ಪ್ಯಾರಿಸ್ ಸಮ್ಮೇಳನದಲ್ಲಿ ಜಾಗತಿಕ ನಾಯಕರು ಸಮ್ಮತಿಸಿದ್ದರು. ಇದರ ಪರಾಮರ್ಶೆ ಈ ಸಿಒಪಿ 26 ಶೃಂಗದಲ್ಲಿ ನಡೆಯಲಿದೆ. ಕಳೆದ ಒಂದೂವರೆ ಶತಮಾನದಲ್ಲೇ ಇಳೆ 1.1 ಡಿಗ್ರಿ ಸೆಲ್ಷಿಯಸ್ನಷ್ಟು ಬಿಸಿಯಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡರೆ 2030ರ ವೇಳೆಗೆ 1.5 ಡಿಗ್ರಿ ಸೆಲ್ಷಿಯಸ್ ಮಿತಿ ದಾಟಲಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
5 ದೇಶ ಬದ್ಧತೆ ತೋರಬೇಕು
ಚೀನಾ, ಆಸ್ಟ್ರೆಲಿಯಾ, ರಷ್ಯಾ, ಜಪಾನ್ ಮತ್ತು ಭಾರತಗಳು ಹವಾಮಾನ ವೈಪರೀತ್ಯ ತಡೆಗೆ ಸಂಬಂಧಿಸಿ ಬದ್ಧತೆಯನ್ನು ತೋರಿಸಬೇಕು. ಪ್ರತಿರೋಧದ ಭಾಷೆಯನ್ನು ಬಿಟ್ಟು ಪ್ಯಾರಿಸ್ ಒಪ್ಪಂದ ಅಂಶಗಳಿಗೆ ಅನುಗುಣವಾಗಿ ಕ್ರಮಗಳನ್ನು ನಿಶ್ಚಿತ ಗಡುವಿನೊಳಗೆ ಜಾರಿಗೊಳಿಸಬೇಕು ಎಂದು ಐರೋಪ್ಯ ಒಕ್ಕೂಟ ಆಗ್ರಹಿಸಿದೆ.
ಸಿಒಪಿ-26 ವಿಶೇಷ
ದ 26 ಕಾನ್ಫರೆನ್ಸ್ ಆ್ ಪಾರ್ಟೀಸ್ ಟು ದ ಯುಎನ್ ್ರೇಮ್ವರ್ಕ್ ಕನ್ವೆನ್ಶನ್ ಆನ್ ಕ್ಲೆಮ್ಯಾಟ್ ಚೇಂಜ್ (ಸಿಒಪಿ26) ಶೃಂಗ ಗ್ಲಾಸ್ಗೋವ್ನಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 12ರ ತನಕ ನಡೆಯಲಿದೆ. 2015ರ ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖ ವಾಗಿರುವ ಅಂಶಗಳ ವಿಶೇಷವಾಗಿ ನಿಯಮ ಮತ್ತು ಕ್ರಮಗಳ ಅನುಷ್ಠಾನವನ್ನು ಅಂತಿಮಗೊಳಿಸುವುದು ಈ ಶೃಂಗದ ಉದ್ದೇಶ.
ಭಾರತದ ಕ್ರಿಯಾಯೋಜನೆ
* ರಾಷ್ಟ್ರೀಯ ಸೌರ ಯೋಜನೆ ? ರಾಷ್ಟ್ರೀಯ ಸುಧಾರಿತ ಇಂಧನ ಸಕ್ಷಮತೆಯ ಯೋಜನೆ
* ರಾಷ್ಟ್ರೀಯ ಸುಸ್ಥಿರ ವಸತಿ ಪ್ರದೇಶ ಯೋಜನೆ ? ರಾಷ್ಟ್ರೀಯ ಜಲ ನೀತಿ
* ಹಿಮಾಲಯ ಪರಿಸರದ ಸುಸ್ಥಿರತಗಾಗಿರುವ ರಾಷ್ಟ್ರೀಯ ಯೋಜನೆ
* ಗ್ರೀನ್ ಇಂಡಿಯಾ & ರಾಷ್ಟ್ರೀಯ ಯೋಜನೆ
* ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ
* ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ವ್ಯೂಹಾತ್ಮಕ ಜ್ಞಾನದ ರಾಷ್ಟ್ರೀಯ ಯೋಜನೆ
* ಕರಾವಳಿ ಸಂಪನ್ಮೂಲ ಸಂರಕ್ಷಣೆಗೆ ಕ್ರಮ
* ಮಾನವ ಆರೋಗ್ಯ ಸಂರಕ್ಷಣೆಗೆ ಸೂತ್ರ
* ತ್ಯಾಜ್ಯದಿಂದ ಪರಿಸರ ಸ್ನೇಹಿ ಇಂಧನ