ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ಕಲಬುರಗಿಯ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಸೌಂದರ್ಯೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಕಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರದರ್ಶನ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಜಗನ್ನಾಥ ಸೂರ್ಯವಂಶಿ, ರವಿ ದಿಗ್ಗಾಂವಿ, ದತ್ತು ಭಾಸಗಿ, ಮಾನಸಿಂಗ್ ಚವ್ಹಾಣ, ಶರಣು ಹೊಸಮನಿ, ರಾಮ ಪೂಜಾರಿ, ಸುಮಾ ಹವಾಲ್ದಾರ, ಮಲ್ಲಿಕಾರ್ಜುನ ಆಲಗೂಡ, ಶಮೀನಾಬೇಗಂ, ಆನಂದ ಕೊಳ್ಳೂರ, ಸಂತೋಷ ತಳವಾರ ಮೊದಲಾದವರಿದ್ದರು.
---