ಬೆಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಭವಿಷ್ಯದ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಥೇಲ್ಸ್ನ ಉಪಾಧ್ಯಕ್ಷ, ಟೆಕ್ನಿಕಲ್ ಆಫೀಸರ್ ಡಾ. ರ್ಬನಾರ್ಡ್ ಕ್ವೆಂಡ್ಟ್ ಸಲಹೆ ನೀಡಿದ್ದಾರೆ.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಶನಿವಾರ ಆಯೋಜಿಸಿದ್ದ 'ಡಿಜಿಟಲ್ ಕರ್ನಾಟಕ ಆರ್ಐಎಸ್ಸಿ-ವಿ' ಕಾರ್ಯಾಗಾರ ಮತ್ತು ಸಿಒಪಿಐ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹೀಂದ್ರಾ ಗ್ರೂಪ್ನ ಉಪಾಧ್ಯಕ್ಷ ಡಾ. ಶಂಕರ್ ವೇಣುಗೋಪಾಲ್ ಮಾತನಾಡಿ, ಆರ್ಐಎಸ್ಸಿ-ವಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಿಂದ ಆಟೋಮೋಟಿವ್ ಉದ್ಯಮದಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.
ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ.ಕೆ. ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಪ್ರಾಯೋಗಿಕ ಕೌಶಲ ತರಬೇತಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಜಿ. ಇಂದುಮತಿ, ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಸಿಇಒ ನಿತಿನ್ ಮೋಹನ್, ಸಿಸಿಸಿಐಆರ್ ನಿರ್ದೇಶಕ ಡಾ. ಸಿರಿಲ್ ಪ್ರಸನ್ನರಾಜ್ ಮತ್ತಿತರರಿದ್ದರು.
ಪ್ರಸ್ತುತ ಆರ್ಐಎಸ್ಸಿ-ವಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮ ರಂಗ ಒಂದಾಗಿ ಕಾರ್ಯನಿರ್ವಹಿಸಬೇಕು.
-ಡಾ.ಸತ್ಯ ಗುಪ್ತಾ, ಅಧ್ಯಕ್ಷ, ವಿಎಲ್ಎಸ್ಐ ಸೊಸೈಟಿ ಆಫ್ ಇಂಡಿಯಾ