ಕಡೂರು: ಶೋಷಿತ ಸಮುದಾಯಗಳನ್ನು ಮೇಲೆತ್ತುವ ಮೂಲಕ ದೇವರಾಜ ಅರಸು ಧೀಮಂತ ನಾಯಕ ಎನಿಸಿಕೊಂಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಜಾರಿಗೆ ತಂದ ಯೋಜನೆಗಳು ಅವಿಸ್ಮರಣೀಯ ಎಂದು ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ ಹೇಳಿದರು.
ತಾಪಂನಲ್ಲಿ ಏರ್ಪಡಿಸಿದ್ದ ದೇವರಾಜು ಅರಸು ಹಾಗೂ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅರಸು ಆಡಳಿತದುದ್ದಕ್ಕೂ ಶೋಷಿತರಿಗೆ ಧ್ವನಿಯಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು. ಭೂ ಸುಧಾರಣೆ ಕಾಯ್ದೆಗಳಿಂದಾಗಿ ಭೂಮಿಯನ್ನು ಸಮಾನಾಗಿ ಹಂಚಿಕೆ ಮಾಡಿದರು. ಹಲವು ಯೋಜನೆಗಳು ಮತ್ತು ಕಾಯ್ದೆಗಳ ತಿದ್ದುಪಡಿ ಲವಾಗಿ ಗ್ರಾಮೀಣರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.
ಪ್ರಾಧ್ಯಾಪಕ ವಿಜಯ್‌ಕುಮಾರ್ ಮಾತನಾಡಿ, ಅನೇಕ ಸವಾಲುಗಳು ಬಂದರೂ ಸಿದ್ಧಾಂತ ಬಿಡದೆ ಸಮನ್ವಯದಿಂದ ಆಡಳಿತ ನೀಡಿದರು.ಜೀವನವಿಡಿ ರಾಜ್ಯದ ಕಲ್ಯಾಣಕ್ಕಾಗಿ ಶ್ರಮಿಸಿದರು ಎಂದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಮಹಾ ಪುರುಷರು ಸಮಾಜದಲ್ಲಿ ತಂದ ಬದಲಾವಣೆಯನ್ನು ಮುಂದುವರಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದರು.
ಬಿಸಿಎಂ ವಸತಿನಿಲಯದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಬಿಸಿಎಂ ಸಹಾಯಕ ನಿರ್ದೇಶಕ ಮಂಜುನಾಥ್, ಟಿ.ಲಕ್ಷ್ಮಣ್, ಮಂಜುನಾಥ್, ಗ್ರಾಪಂ ಸದಸ್ಯ ಸುಧಾಕಾಂತ್ ಹೆಳವಾರ್, ನಿಲಯದ ಮೇಲ್ವಿಚಾರಕಾರದ ಅನಿಲ್, ದೇವರಾಜ್, ರವಿಕುಮಾರ್, ಮಮತಾ, ಕವಿತಾ, ಪ್ರೇಮಕುಮಾರಿ ಇತರರಿದ್ದರು.