ಹೈದರಾಬಾದ್: ಕಳೆದ ವಾರ ಪ್ರೇಕ್ಷಕರ ಮುಂದೆ ಬಂದಿದ್ದ ಎನ್ ಟಿಆರ್ ನಿರ್ದೇಶನದ ಕೊರಟಾಲ ಶಿವ ನಿರ್ದೇಶನದ 'ದೇವರ'(Devara) ಚಿತ್ರ ಮೊದಲ ದಿನ ಭರ್ಜರಿ ಓಪನಿಂಗ್ಸ್ ದಾಖಲಿಸಿತು. ಆದರೆ ಆರಂಭದಲ್ಲಿ ಅಬ್ಬರಿಸಿದ ಚಿತ್ರ ಆರನೇ ದಿನಕ್ಕೆ ಮುಗ್ಗರಿಸಿದೆ.
ಇದನ್ನೂ ಓದಿ: Womens T-20 World Cup: ಯುಎಇಯಲ್ಲಿ ಇಂದಿನಿಂದ ಪ್ರಾರಂಭ..ಕಪ್ ಗೆಲ್ಲುವ ಫೆವರೀಟ್ ತಂಡ ಯಾವುದು ಗೊತ್ತಾ?
ಮೊದಲ ದಿನ ರೂ.172 ಕೋಟಿ ಕಲೆಕ್ಷನ್ ಮಾಡಿದ್ದ 'ದೇವರ'(Devara) ಚಿತ್ರ ಎರಡನೇ ದಿನ ರೂ.243 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ದಿನಕ್ಕೆ 300 ಕೋಟಿ ದಾಟಿದ್ದು, ವಾರದಲ್ಲಿ(ಆರು ದಿನಕ್ಕೆ) 396 ಕೋಟಿ ಕಲೆಕ್ಷನ್ ದಾಖಲಿಸಿದೆ. ಈ ಅಂಕಿಅಂಶಗಳು ಮೊದಲ ಮೂರು ದಿನಗಳ ನಂತರ ಕಲೆಕ್ಷನ್ ತೀವ್ರವಾಗಿ ಕುಸಿದಿರುವುದನ್ನು ಸಾರಿ ಸಾರಿ ಹೇಳುತ್ತಿವೆ.
ದೇವರ ಮೊದಲ ದಿನದ ಕಲೆಕ್ಷನ್ ನೋಡಿ ಎಲ್ಲರೂ ಸಕ್ಸಸ್ ಖಚಿತ ಎಂದುಕೊಂಡಿದ್ದರು. ಅಮೆರಿಕದ ಜೊತೆಗೆ ಎಲ್ಲೆಡೆ ಹೊಸ ದಾಖಲೆ ಬರೆಯುವುದು ಖಚಿತ ಎನ್ನಲಾಗಿತ್ತು. ಆದರೆ ಮೂರನೇ ದಿನದಿಂದ ಬಾಕ್ಸ್ ಆಫೀಸ್ ನಲ್ಲಿ ದೇವರ ಅಬ್ಬರ ಕಡಿಮೆಯಾಗಿದೆ. ಮೊದಲ ಮೂರು ದಿನದಲ್ಲಿ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ ದೇವರಾ ನಂತರದ ನಾಲ್ಕು ದಿನಗಳಲ್ಲಿ ಕನಿಷ್ಠ 100 ಕೋಟಿ ರೂ.ಗಳನ್ನು ಕಲೆಕ್ಷನ್ ಮಾಡಲು ವಿಫಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ 500 ಕೋಟಿ ರೂ.ವರೆಗೂ ಕಲೆಕ್ಷನ್ ಆಗುತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.