ನ್ಯೂಸ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೈಫ್​ ಆಲಿ ಖಾನ್​: ಮುಂದಿನ ಸಿನಿಮಾದ ಫಸ್ಟ್​​ ಲುಕ್​ ರಿಲೀಸ್​​

ಹೈದರಬಾದ್​​: ಬಾಲಿವುಡ್​​ ನಟ ಸೈಫ್​ ಆಲಿ ಖಾನ್​ ಅವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ. ಮೆಚ್ಚಿನ ನಟನಿಗೆ ಅಭಿಮಾನಿಗಳು ಹಾಗೂ ಬಿಟೌನ್​ ಕ್ಲಬ್​ ಶುಭಾಶಯವನ್ನ ಕೋರಿದೆ. ಇದರ ನಡುವೆ ಅವರ ಮುಂದಿನ ಸಿನಿಮಾದ ಫಸ್ಟ್​​ ಲುಕ್​ ಕೂಡಾ ರಿಲೀಸ್​ ಆಗಿದೆ.


ಸೈಫ್​ ಅಲಿ ಖಾನ್​ ಅವರ ಹುಟ್ಟುಹಬ್ಬದ ಪ್ರಯುಕ್ತ 'ದೇವರ' ಚಿತ್ರತಂಡದ 'ಭೈರಾ' ಪಾತ್ರದ ಫಸ್ಟ್​​ ಲುಕನ್ನ ರಿವೀಲ್​ ಮಾಡಿದ್ದಾರೆ. ನಾಯಕ ನಟ ಜೂ. ಎನ್​ಟಿಆರ್​​ ಹಾಗೂ ಚಿತ್ರತಂಡ ಸೈಫ್​ ಅಲಿ ಖಾನ್​ಗೆ ವಿಶ್​ ಮಾಡಿದ್ದಾರೆ.


ಇದೊಂದು ಕಮರ್ಷಿಯಲ್​ ಱಕ್ಷನ್​ ಸಿನಿಮಾವಾಗಿದ್ದು, ಸಿನಿಮಾದಲ್ಲಿ ಭೈರಾ ಎಂಬುವ ಪಾತ್ರದಲ್ಲಿ ಸೈಫ್​ ಕಾಣಿಸಿಕೊಳ್ಳಲಿದ್ದಾರೆ.
ಉದ್ದ ಕೂದಲು ಬಿಟ್ಟು ಸೈಫ್​ ರಗಡ್​​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾದಲ್ಲಿ ವಿಲನ್​ ಪಾತ್ರವನ್ನ ನಿರ್ವಹಿಸಲಿದ್ದಾರೆ.
'ದೇವರ' ಚಿತ್ರದಲ್ಲಿ ಜೂ. ಎನ್​ಟಿಆರ್​​, ಸೈಫ್​​ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಪ್ರಮುಖ ಪಾತ್ರದಲ್ಲಿದ್ದಾರೆ.

ಯಮಸುಧಾ ಆರ್ಟ್ಸ್​​ ಮತ್ತು ಡೆನ್​.ಟಿ ಆರ್ಟ್ಸ್​​​ ಈ ಚಿತ್ರವನ್ನ ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್​ ರಾಮ್​ ಅವರು ಪ್ರಸ್ತುತ ಪಡಿಸಿದ್ದಾರೆ. ಮೊದಲಢೇ ಘೋಷಿಸಿದಂತೆ 'ದೇವರ' ಏಪ್ರಿಲ್​ 5, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.