ನ್ಯೂಸ್

ಬಿ.ಎಂ. ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ಆಚರಣೆ

Haveri - Kariyappa Aralikatti

ಹಾವೇರಿ: ತಾಲೂಕಿನ ದೇವಗಿರಿಯ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಬಿ.ಎಂ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ ಸಂಭ್ರಮದಿಂದ ಶನಿವಾರ ಜರುಗಿತು.
ಸಂಸ್ಥೆಯ ಅಧ್ಯಕ್ಷ ಮಾ. ನಾಗರಾಜ ಸಮಾರಂಭ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾಲಯದ ರೂಪುರೇಷಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಎಂ. ಗಣೇಶ ವಾರ್ಷಿಕ ವರದಿ ಮಂಡಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಬೆಂಗಳೂರಿನ ಅಂಬೇಡ್ಕರ್ ವಿಶ್ವ ವಿದ್ಯಾಲಯದ ಮಂಜುನಾಥ ಕೆ.ವಿ., ಮೃತುಂಜಯ ತುರಕಾಣಿ, ನಿವೃತ್ತ ಪಿಎಸ್‌ಐ ಎಂ.ಆರ್. ಪೂಜಾರ, ಮೇರಿ ಸಿ.ಎಲ್., ಭಾಸ್ಕರ, ಚಿಕ್ಕಯ್ಯ, ಚನ್ನೇಗೌಡ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.