ಕಾಮನ್ವೆಲ್ತ್ ಗೇಮ್ಸ್: ವೇಯ್ಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿಗೆ ಬಂಗಾರದ ನಿರೀಕ್ಷೆ
ಗ್ಲಾಸ್ಗೋ: ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತದ ಪದಕ ನಿರೀಕ್ಷೆಯ ಪ್ರಮುಖ ಕ್ರೀಡೆಗಳಲ್ಲಿ ಒಂದಾಗಿರುವ ವೇಯ್ಟ್ಲಿಫ್ಟಿಂಗ್ ಸ್ಪರ್ಧೆ ಭಾನುವಾರ ಆರಂಭಗೊಳ್ಳಲಿದೆ. ಭಾರತ 11 ವೇಯ್ಟ್ಲಿಫ್ಟರ್ಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು, ಪ್ರಮುಖ ಪದಕ ಆಕಾಂಯಾಗಿರುವ ಟೋಕಿಯೊ ಒಲಿಂಪಿಕ್ಸ್ ರಜತ ವಿಜೇತೆ ಮೀರಾಬಾಯಿ ಚಾನು (Mirabai Chanu) ಮೊದಲ ದಿನವೇ ಕಣಕ್ಕಿಳಿಯಲಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದ ಮೀರಾಬಾಯಿ ಈ ಬಾರಿ ಹ್ಯಾಟ್ರಿಕ್ ಬಂಗಾರದ ಸಾಧನೆ ತೋರುವ ನಿರೀಕ್ಷೆ ಇದೆ.
2022ರ ಆವೃತ್ತಿಯಲ್ಲಿ ಭಾರತ ವೇಯ್ಟ್ಲಿಫ್ಟಿಂಗ್ನಲ್ಲಿ 3 ಚಿನ್ನ, 3 ಬೆಳ್ಳಿ, 4 ಕಂಚಿನ ಸಹಿತ 10 ಪದಕಗಳನ್ನು ಗೆದ್ದು ಬೀಗಿತ್ತು. ಡೋಪಿಂಗ್ ಪ್ರಕರಣಗಳಿಂದಾಗಿ ಕೋಟಾ ಸ್ಥಾನ ಕಡಿತಗೊಂಡಿರುವ ಕಾರಣ ಭಾರತ ಈ ಬಾರಿ 16ರ ಪೈಕಿ 11ರಲ್ಲಿ ಮಾತ್ರ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದೆ. ಇದು ಈ ಸಲ ಭಾರತದ ಪದಕ ಆಕಾಂಕ್ಷೆಗೆ ಸ್ವಲ್ಪ ಹಿನ್ನಡೆ ತರುವ ಸಾಧ್ಯತೆ ಇದೆ. ಆದರೆ ಕಣದಲ್ಲಿರುವ ಭಾರತದ ಎಲ್ಲ 11 ವೇಯ್ಟ್ಲಿಫ್ಟರ್ಗಳೂ ಪದಕ ವೇದಿಕೆ ಏರುವ ಸಾಮರ್ಥ್ಯ ಉಳ್ಳವರಾಗಿದ್ದಾರೆ.
ಭಾನುವಾರ 48 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿರುವ 31 ವರ್ಷದ ಮೀರಾಬಾಯಿ ಭಾರತಕ್ಕೆ ಕೂಟದ ಮೊದಲ ಬಂಗಾರದ ಪದಕ ಗೆದ್ದುಕೊಡುವ ಹಂಬಲದಲ್ಲಿದ್ದಾರೆ. ಇನ್ನೆರಡು ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲೂ ಚಿನ್ನದ ಪದಕ ಗೆಲ್ಲುವ ಕನಸು ಹೊಂದಿರುವ ಮಣಿಪುರದ ತಾರೆ ಮೀರಾಬಾಯಿ ಗ್ಲಾಸ್ಗೋದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಸ್ಪರ್ಧಿಸಲಿದ್ದಾರೆ. ಹೀಗಾಗಿ ಸ್ನಾಚ್ನಲ್ಲಿ 90 ಕೆಜಿ ಭಾರ ಎತ್ತುವ ಪ್ರಯತ್ನ ನಡೆಸುವುದಿಲ್ಲ. ಏಷ್ಯನ್ ಗೇಮ್ಸ್ ನನ್ನ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಜ್ಞಾನೇಶ್ವರಿ ಯಾದವ್ (53 ಕೆಜಿ), ರಿಶಿಕಾಂತ ಸಿಂಗ್ (60ಕೆಜಿ), ಎಂ. ರಾಜಾ (65 ಕೆಜಿ) ಬಂಗಾರದ ನಿರೀೆ ಹೊಂದಿರುವ ಇತರ ಲ್ಟಿರ್ಗಳಾಗಿದ್ದಾರೆ. ಬಿಂದ್ಯಾರಾಣಿ ದೇವಿ (58), ನಿರುಪಮಾ ದೇವಿ (63), ಹರ್ಜಿಂದರ್ ಕೌರ್ (69), ಸಂಜನಾ (77), ಮಾರ್ಟಿನಾ ದೇವಿ (86+), ಅಜಯ ಬಾಬು (79), ಲವ್ಪ್ರೀತ್ ಸಿಂಗ್ (110+) ಕಣದಲ್ಲಿರುವ ಭಾರತದ ಇತರ ಲಿಫ್ಟರ್ಗಳಾಗಿದ್ದಾರೆ.