ಹಾವೇರಿ: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ- ಯುವತಿಯರಿಗೆ ಮಾ. 17ರಿಂದ ಇಲೆಕ್ಟ್ರಿಕಲ್ ಮೋಟರ್ ರಿವೈಡಿಂಗ್, ಮಾ. 21ರಿಂದ ಕಂಪ್ಯೂಟರ್ ಡಿಟಿಪಿ ಹಾಗೂ ಎಪ್ರಿಲ್ ಮಾಹೆಯಲ್ಲಿ ಪಾಪಡ ಪಿಕಲ್ ಮತ್ತು ಮಸಾಲಾ ಪೌಡರ್, ಕುರಿ ಸಾಕಾಣಿಕೆ, ಮಹಿಳೆಯರಿಗಾಗಿ ಹೋಲಿಗೆ ತರಬೇತಿ ಆಯೋಜಿಸಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ಅಭ್ಯಥಿರ್ಗಳು 19ರಿಂದ 45 ವರ್ಷದೊಳಗಿರಬೇಕು. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯಥಿರ್ಗಳು ಸ್ವ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಅಜಿರ್ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.