ನ್ಯೂಸ್

'ಕಿಚ್ಚ ಸುದೀಪ್' ವಿರುದ್ಧ ಅವಹೇಳನಕಾರಿ ಪೊಸ್ಟ್​; ಪೊಲೀಸ್ ಆಯುಕ್ತರಿಗೆ ದೂರು| Sudeep

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಂಡಲ್​ವುಡ್​ನ ಸ್ಟಾರ್​​ ನಟರನ್ನು ಅವಮಾನಿಸುವ ಕೆಲಸ ತುಂಬಾ ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಫೇಕ್​ ಅಕೌಂಟ್​ ಬಳಸಿ ಇತರ ಹೀರೋಗಳ ಅವಹೇಳನಕಾರಿ ಪೋಸ್ಟ್​ ಹಾಗೂ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡುವ ಪ್ರಕ್ರಿಯೆ ಜೋರಾಗಿದೆ.

ಯಾರದ್ದೋ ಹೆಸರನ್ನು ಅವರ ಮಧ್ಯೆ ತಂದಿಟ್ಟು ಸುದೀಪ್​ರನ್ನು ಟ್ರೋಲ್​ ಮಾಡುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಇದರಿಂದ ಕೋಪಗೊಂಡಿರುವ ಕಿಚ್ಚನ ಅಭಿಮಾನಿಗಳು ಈ ಬಗ್ಗೆ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಟ್ವಿಟ್ಟರ್ ಸೇರಿ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರಿಗೆ ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಕಠಿಣ ಎಚ್ಚರಿಕೆ ವಹಿಸುವಂತೆ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ಈ ದೂರು ನೀಡಲಾಗಿದೆ.

ಬಹುತೇಕ ಹೀರೋಗಳಿಗೆ ಅಭಿಮಾನಿಗಳ ಜೊತೆಗೆ ಅವರನ್ನು ಧ್ವೇಷಿಸುವ ವರ್ಗವೂ ಸಹ ಇದ್ದೇ ಇರುತ್ತದೆ. ಅಂದಹಾಗೆ ಬಾದ್​ಷಾ ಕಿಚ್ಚ ಸುದೀಪ್​ಗೆ ಅನೇಕ ಅಭಿಮಾನಿ ಬಳಗ ಇರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಅವರನ್ನು ಅವಮಾನಿಸುವ ವರ್ಗವೂ ಸಹ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದೆ.

ದೂರಿನಲ್ಲಿ ಏನಿದೆ.?

(ಏಜೆನ್ಸೀಸ್)

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾಗಿರುವ ಕಿಚ್ಚ ಸುದೀಪ ರವರ ವಿರುದ್ಧ ಎಕ್ಸ್​ (ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ವಿಕೃತವಾದ ವೈಯಕ್ತಿಕ ನಿಂದನೆ ಮಾಡುವ / ಹೀಯಾಳಿಸುವ ಫೇಕ್ ಫೋಟೋಶಾಪ್ ವಿಡಿಯೋ ಹಾಗು ಫೋಟೋಗಳನ್ನು ಹರಿಬಿಡುವುದು ಅಶ್ಲೀಲ ಪದಬಳಕೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇದು ಕನ್ನಡ ಚಿತ್ರರಂಗದ ಕಲಾವಿದರ ನಡುವಿನ ಸಮರಕ್ಕೆ ಮತ್ತು ಸ್ಟಾರ್ ವಾರ್​ಗೆ ಕಾರಣವಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ನೇರ ಕಾರಣವಾಗಿದೆ. ಈ ದೂರಿನ ಜೊತೆಗೆ ಲಗ್ಗತ್ತಿಸಲಾಗಿರುವ ಅಂತಹ ಹಲವಾರು ಖಾತೆಗಳು ಹಾಗೂ ಪೋಸ್ಟ್‌ಗಳ ವಿವರವನ್ನು ಪರೀಶೀಲಿಸಿ ಅವರ ವಿರುದ್ಧ ಈ ಕೂಡಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.