ಎಂ.ಚಂದ್ರಶೇಖರ್ 
ನ್ಯೂಸ್

ಖಿನ್ನತೆಗೆ ಒಳಗಾಗಿದ್ದ ಸೈನಿಕ ಆತ್ಮಹತ್ಯೆ

ಎಂ.ರವಿ

ಹುಣಸೂರು: ಕೆ.ಎಸ್.ಆರ್.ಟಿ.ಸಿ.ಡಿಪೋ ಹಿಂಬಾಗದ ಬಡಾವಣೆ ನಿವಾಸಿಯಾಗಿದ್ದ ಸೈನಿಕ ಸಾಲ ಮಾಡಿಕೊಂಡು ಖಿನ್ನೆತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಲೂಕಿನ ನಂಜಾಪುರದ ಮಂಜುನಾಥ ಶೆಟ್ಟಿ ಅವರ ಪುತ್ರ ಭೂ ಸೇನೆಯ ಬೆಂಗಳೂರಿನ ಆರ್.ಟಿ.ನಗರದ ಪ್ಯಾರಾಚೂಟ್ ರೆಜಿಮೆಂಟ್‌ನ ಸೈನಿಕ ಎಂ.ಚಂದ್ರಶೇಖರ್(35) ಮೃತಪಟ್ಟವರು. ಇವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಸೈನಿಕ ಎಂ.ಚಂದ್ರಶೇಖರ್ ಕೆಎಸ್‌ಆರ್‌ಟಿಸಿ ಡಿಪೋ ಹಿಂಬಾಗದ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಮನೆ ನಿರ್ಮಿಸಿದ್ದರು. ಆ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿಡಿದ್ದರು. ಶನಿವಾರ ರಾತ್ರಿ ಪತ್ನಿ ಮಕ್ಕಳು ಮನೆಯ ಹೊರಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಐ ಜಮೀರ್ ಅಹಮದ್ ತಿಳಿಸಿದ್ದಾರೆ.

ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದ ಚಂದ್ರಶೇಖರ್ ದೀಪಾವಳಿ ಹಬ್ಬದ ನಂತರ ಕರ್ತವ್ಯಕ್ಕೆ ವಾಪಸ್ ತೆರಳಬೇಕಿತ್ತು. ಭಾನುವಾರ ಶವ ಪರೀಕ್ಷೆ ನಂತರ ಸ್ವಗ್ರಾಮ ನಂಜಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು. ಕಳೆದ 15 ವರ್ಷಗಳಿಂದ ಜಮ್ಮುಕಾಶ್ಮೀರ, ಆಗ್ರಾ, ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಾನು ಆತನೊಂದಿಗೆ ಕಾರ್ಯ ನಿರ್ವಹಿಸಿದ್ದು, ಉತ್ತಮ ಹೆಸರು ಪಡೆದಿದ್ದ ಆತನ ಸಾವು ನೋವು ತಂದಿದೆ ಎಂದು ಸಹೊದ್ಯೋಗಿ ಸೈನಿಕ ಮಹಮದ್ ಬೇಗ್ ತಿಳಿಸಿದರು.