ಆನೇಕಲ್: ಕ್ರಿಕೆಟಿಗ, ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಮಕ್ಕಳ ಕಲಿಕೆಗಾಗಿ ಬೆಂಗಳೂರಿನಲ್ಲಿ ಆರಂಭಿಸಿರುವ ಎಂ.ಎಸ್ ಧೋನಿ ಗ್ಲೋಬಲ್ ಸ್ಕೂಲ್ ಶಾಲೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದೆ. ಆದರೆ ಶಾಲೆಯಲ್ಲಿ ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಹಿನ್ನಲೆ ಎಂಎಸ್ ಧೋನಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
ನಗರದ ಆರ್ಕಿಡ್ ಶಾಲೆ ಜತೆಗೆ ಎಂಎಸ್ ಧೋನಿ ಶಾಲೆಗೂ ನೋಟಿಸ್ ನೀಡಲಾಗಿದೆ. ಕಳೆದ ವರ್ಷ 2021-22 ರಲ್ಲಿ ಸಿಂಗಸಂದ್ರದಲ್ಲಿ ಎಂಎಸ್ ಧೋನಿಯ ಶಾಲೆ ಆರಂಭವಾಗಿತ್ತು. ಆದರೆ ಸಿಬಿಎಸ್ಇ ಸೇರಿದಂತೆ ಅನಧಿಕೃತ ಪಠ್ಯ ಬೋಧನೆಯಡಿ ಶಾಲೆಗೆ ನೋಟಿಸ್ ನೀಡಲಾಗಿದೆ.
ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದು, ಪ್ರಸಕ್ತ ವರ್ಷ ಶಾಲೆಯಲ್ಲಿ 248 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಬೆಂಗಳೂರಿನ 8 ಅನಧಿಕೃತ ಆರ್ಕಿಡ್ ಶಾಲೆಗೆ ಶಿಕ್ಷಣ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ.
2022ರಲ್ಲಿ ಪ್ರಾರಂಭವಾದ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ನಲ್ಲಿ ಒಂದನೇ ತರಗತಿಗೆ 1.47 ಲಕ್ಷ ರೂ. ಎರಡನೇ, ಮೂರನೇ ತರಗತಿ ಪಠ್ಯ, ಪುಸ್ತಕ, ಸಮವಸ್ತ್ರ ಸೇರಿ 1.56 ಲಕ್ಷ ಫೀಸ್ ನಿಗದಿ ಮಾಡಲಾಗಿದೆ. ಪೋಷಕರಿಗೆ ಸಿಬಿಎಸ್ಸಿ ಶಾಲೆ ಎಂದು ಹೇಳಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಆದರೆ ಸಿಬಿಎಸ್ಸಿ ಪಠ್ಯಕ್ರಮಕ್ಕೆ ಇನ್ನೂ ಪರವಾನಗಿ ಸಿಕ್ಕಿಲ್ಲ.
ನೋಟಿಸ್ ಜಾರಿಯಾದ ಬಗ್ಗೆ ಎಂಎಸ್ ಧೋನಿ ಶಾಲೆ ಆಡಳಿ ಮಂಡಳಿ ಪ್ರತಿಕ್ರಿಯೆ ನೀಡಿದ್ದು ರಾಜ್ಯ ಶಿಕ್ಷಣ ಇಲಾಖೆ ಪಠ್ಯವನ್ನೇ ಬೋಧಿಸುತ್ತಿದ್ದು, ಪೋಷಕರ ಒತ್ತಾಯದ ಮೇರೆಗೆ ಹೆಚ್ಚಿನ ವಿಷಯ ಓದಿಸಲಾಗಿದೆ. ಎರಡು ತಿಂಗಳ ಬಳಿಕ ಸಿಬಿಎಸ್ಸಿ ಪರವಾನಗಿ ಸಿಗಲಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಸಿಬಿಎಸ್ಸಿ ಕ್ರಮ ಅನ್ವಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.