ಆನವಟ್ಟಿ ಕೆಪಿಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಿಇಒ ಆರ್.ಪುಷ್ಪಾ, ಚೌಟಿ ಚಂದ್ರಶೇಖರ ಪಾಟೀಲ್, ಮಧುಕೇಶ್ವರ ಪಾಟೀಲ್, ಜಿ.ರೇವಣಪ್ಪ, ಎಂ.ಮಹದೇವಪ್ಪ ಇತರರಿದ್ದರು.  
ನ್ಯೂಸ್

ಮಕ್ಕಳೇ, ಕ್ರೀಡೆಗೂ ಆದ್ಯತೆ ನೀಡಿ

ಆನವಟ್ಟಿ: ಪಠ್ಯದ ಜತೆಗೆ ಮಕ್ಕಳು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ಬಿಇಒ ಆರ್.ಪುಷ್ಪಾ ಹೇಳಿದರು.
ಪಟ್ಟಣದ ಕೆಪಿಎಸ್ ಶಾಲಾ ಮೈದಾನದಲ್ಲಿ ಶಿಕ್ಷಣ ಇಲಾಖೆ ಹಾಗೂ ಸ್ಯಾನ್ ಥೋಮ್ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಹಾಗೂ ಸರ್ಕಾರಿ ನೌಕರಿ ಪಡೆಯಲು ಕ್ರೀಡಾ ಮೀಸಲಾತಿ ಸಹ ಇರುತ್ತದೆ. ಹೀಗಾಗಿ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸ್ಯಾನ್ ಥೋಮ್ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಎಂ.ಜೆ.ಮಿನಿ, ಎಸ್‌ಡಿಎಂಸಿ ಅಧ್ಯಕ್ಷ ಮಧುಕೇಶ್ವರ ಪಾಟೀಲ್, ಮುಖಂಡ ಚೌಟಿ ಚಂದ್ರಶೇಖರ ಪಾಟೀಲ್, ಜಿ.ರೇವಣಪ್ಪ, ಉಪ ಪ್ರಾಚಾರ್ಯ ಎಂ.ಮಹದೇವಪ್ಪ, ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ, ಅರುಣಕುಮಾರ್, ಪ್ರೇಮಕುಮಾರ, ಸಂಜೀವಕುಮಾರ್, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗಣಪತಿ ಇತರರಿದ್ದರು.