ಹಲ್ಲು ಕೀಳುವ ಪ್ರಕ್ರಿಯೆ ತುಂಬ ಸೂಕ್ಷ್ಮವಾದದ್ದು. ದೃಢವಾಗಿ ನಿಂತು, ಕೈಗಳ ಮೂಲಕ ತಜ್ಞ ದಂತವೈದ್ಯರು ಈ ಕೆಲಸ ಮಾಡುತ್ತಾರೆ. ಹಲ್ಲು ಕೀಳುವಾಗ ರೋಗಿಯೂ ಅಲುಗಾಡಬಾರದು..ವೈದ್ಯರೂ ಕೈಗಳನ್ನು ಅಲುಗಾಡಿಸಬಾರದು. ಹಾಗೇನಾದರೂ ಆದರೆ ರೋಗಿಗೆ ಗಂಭೀರ ಗಾಯಗಳಾಗುವ ಸಾಧ್ಯತೆಯೂ ಇರುತ್ತದೆ.
ಆದರೆ ಇಲ್ಲೊಬ್ಬ ವೈದ್ಯ ಹೋವರ್ಬೋರ್ಡ್ (ಸ್ಕೇಟ್ಬೋರ್ಡ್ನ್ನು ಹೋಲುವ ಸಾಧನವಾಗಿದ್ದು, ಅದರ ಮೇಲೆ ನಿಂತು ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಬಹುದು) ಮೇಲೆ ನಿಂತು ರೋಗಿಯೋರ್ವನ ಹಲ್ಲು ತೆಗೆದಿದ್ದಾರೆ.
ಪ್ರಜ್ಞೆಯಿಲ್ಲದೆ ಮಲಗಿದ್ದ ರೋಗಿಯ ಹಲ್ಲನ್ನು ಈ ವೈದ್ಯ ಹೋವರ್ ಬೋರ್ಡ್ ಮೇಲೆ ನಿಂತು ಬೇಕಾಬಿಟ್ಟಿ ಹೊರತೆಗೆದಿದ್ದಾನೆ. ನಂತರ ಹೋವರ್ಬೋರ್ಡ್ ಮೇಲೆಯೇ ಅಲ್ಲಿಂದ ಹೋಗುವ ವಿಡಿಯೋ ವೈರಲ್ ಆಗಿದೆ. ಆ ವೈದ್ಯನಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: 18ರಿಂದ ಬದಲಾಗಲಿದೆ ಎಟಿಎಂ ವಿತ್ಡ್ರಾ ರೂಲ್ಸ್: ಇಲ್ಲಿದೆ ಮಾಹಿತಿ
ಯುಎಸ್ನಲ್ಲಿ ಘಟನೆ ನಡೆದಿದ್ದು ಈ ವೈದ್ಯನನ್ನು ಸೇಥ್ ಲಾಕ್ಹಾರ್ಟ್ ಎಂದು ಗುರುತಿಸಲಾಗಿದೆ. ವೆರೊನಿಕಾ ವಿಹೆಲ್ಮ್ ಎಂಬಾಕೆಗೆ ಈತ ಇಷ್ಟು ನಿರ್ಲಕ್ಷ್ಯದಿಂದ ಹಲ್ಲು ತೆಗೆದಿದ್ದಾಗಿ ಗೊತ್ತಾಗಿದೆ.
ವೆರೊನಿಕಾ ಅವರಿಗೆ ಹೇಳದೆಯೇ ಅನಸ್ತೇಶಿಯಾ ಕೊಟ್ಟಿದ್ದ ವೈದ್ಯ ನಂತರ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದ. ಅಷ್ಟೇ ಅಲ್ಲ ಈ ಹಿಂದೆ ಹಲವು ವಂಚನೆ ಪ್ರಕರಣಗಳಲ್ಲೂ ಈತನ ಹೆಸರು ಕೇಳಿಬಂದಿದ್ದು ಕೋರ್ಟ್ ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಲಾಕ್ಹಾರ್ಟ್ಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ, ನ್ಯಾಯಾಲಯ ತೀರ್ಪು ನೀಡಿದೆ.
ಲೊಕ್ಹಾರ್ಟ್ 2015ರಿಂದ ದಂತವೈದ್ಯಕೀಯ ಶಾಸ್ತ್ರ ಅಭ್ಯಾಸ ಪ್ರಾರಂಭಿಸಿದ್ದ. ಈತನ ಎಡವಿಡಂಗಿ ಕೆಲಸಗಳ ಬಗ್ಗೆ ಸಹೋದ್ಯೋಗಿ ವೈದ್ಯರೇ ತಿಳಿಸಿದ್ದಾರೆ. (ಏಜೆನ್ಸೀಸ್)