ನ್ಯೂಸ್

ಗೌರಿ-ಗಣಪತಿ ಮೂರ್ತಿ ವಿಸರ್ಜನೆ

ಬನ್ನೂರು: ಪಟ್ಟಣದ ಶ್ರೀ ಏಕದಂತ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ಸೋಮವಾರ ಸಾಂಪ್ರದಾಯಿಕವಾಗಿ ಬನ್ನೂರಿನ ಹೆಗ್ಗೆರೆಯಲ್ಲಿ ವಿಸರ್ಜಿಸಲಾಯಿತು.

ಗೌರಿ-ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ನಗಾರಿ ಶಬ್ದ ಮೆರಗು ನೀಡಿತು. ಯುವಕರು ವಿನಾಯಕನಿಗೆ ಜಯಗೋಷ ಕೂಗುತ್ತಾ ಸಾಗಿದರು. ಮೆರವಣಿಗೆ ಪಟ್ಟಣದ ತ್ಯಾಗರಾಜ ಮೊಹಲ್ಲಾ, ದೊಡ್ಡ ಅಂಗಡಿ ಬೀದಿ, ತೇರಿನ ಬೀದಿ, ಬಸ್ ನಿಲ್ದಾಣ, ಎಸ್‌ಆರ್‌ಪಿ ರಸ್ತೆ, ಎಂ.ಎಂ ರಸ್ತೆಯಲ್ಲಿ ಸಾಗಿತು.