ನ್ಯೂಸ್

ಬ್ಯಾಂಕ್ ನಿವೃತ್ತರ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸೆ. 23 ರಂದು ಫ್ರೀಡ್‌ಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ.

ಬೆಂಗಳೂರು: ಭಾರತೀಯ ಬ್ಯಾಂಕುಗಳ ಸಂಘವು ಬ್ಯಾಂಕ್ ನಿವೃತ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಿದ್ದು, ಇದರ ವಿರುದ್ಧ ಸೆ. 23 ರಂದು ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ಕಿರಿಯ ಸಿಬ್ಬಂದಿಗೆ ಹೋಲಿಸಿದರೆ 1992 ರಲ್ಲಿ ನಿವೃತ್ತರಾದ ಹಿರಿಯ ಶ್ರೇಣಿಯ ಕಾರ್ಯನಿರ್ವಾಹಕರಿಗೆ ತುಂಬಾ ಕಡಿಮೆ ಪಿಂಚಣಿ ದೊರೆಯುತ್ತಿದೆ. ತಾರತಮ್ಯ ನಿವೃತ್ತರನ್ನು ಭಾಧಿಸುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ವಿಮೆ ದೊರೆಯುತ್ತಿಲ್ಲ. ವಿಮಾ ವೆಚ್ಚವನ್ನು ನಿವೃತ್ತರೇ ಭರಿಸುವಂತಾಗಿದೆ. ಜತೆಗೆ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಆರೋಗ್ಯ ವಿಮೆಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವಂತೆ ಅಥವಾ ಅದಕ್ಕೆ ಗಣನೀಯವಾಗಿ ಸಬ್ಸಿಡಿ ನೀಡುವಂತೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಎನ್. ಕೃಷ್ಣ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ವಿಚಾರದಲ್ಲಿ ಮೂಕ ಪ್ರೇಕ್ಷಕರಾಗಿ ಉಳಿದಿದೆ.ಅಲ್ಲದೆ, ವಿಮಾ ಕಂತಿನ ಮೇಲೆ ಶೇ 18 ರಷ್ಟು ಜಿ.ಎಸ್.ಟಿ ವಿಧಿಸಿರುವುದು ಮತ್ತೊಂದು ಬರೆ ಎಳೆದಂತಾಗಿದೆ.ನಿವೃತ್ತರಿಗೆ ಕಮ್ಯುಟೇಶನ್ ಪಿಂಚಣಿ, ಗ್ರಾಚ್ಯುಟಿ, ಪಿಂಚಣಿ ಆಯ್ಕೆ ಮತ್ತು ದಿನ ಭತ್ಯೆಯಲ್ಲಿನ ಅಸಮಾನತೆಯ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕು. ತಮ್ಮ ಹೋರಾಟವನ್ನು ತೀವ್ರಗೊಳಿಸಲು ಇದೇ ಸೆ.23 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಹಮ್ಮಿಕೊಂಡಿದ್ದೇವೆ. ನಂತರ ಅಕ್ಟೋಬರ್ ತಿಂಗಳಲ್ಲಿ ಎಲ್ಲ ರಾಜ್ಯ ರಾಜಧಾನಿಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ಕೆ ವಿ ಆಚಾರ್ಯ, ಜಿ ಡಿ ನದ್ಾ, ಎಂ ಆರ್‌ಗೋಪಿನಾಥ್ ರಾವ್, ಎ ಎನ್ ಕೃಷ್ಣ ಮೂರ್ತಿ, ರಾಜ್ಯ ಕಾರ್ಯದರ್ಶಿ, ಭಾಗವಹಿಸಿದ್ದರು