ಕೋಲಾರ ತಾಲೂಕಿನ ವಡಗೂರು ಸೊಸೈಟಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಗಳ ಸದಸ್ಯರು ಡಿಸಿಸಿ ಬ್ಯಾಂಕ್​ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಠೇವಣಿ ಮೊತ್ತ ವಾಪಸ್​ ನೀಡಲು ಪಟ್ಟು

ಕಿರುವಾರ ಎಸ್.ಸುದರ್ಶನ್

ಕೋಲಾರ: ಮಹಿಳಾ ಸ್ವಸಹಾಯ ಸಂಗಳಿಂದ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ಮೊತ್ತವನ್ನು ವಾಪಸ್​ ನೀಡಬೇಕು ಎಂದು ಒತ್ತಾಯಿಸಿ, ವಡಗೂರು ಸೊಸೈಟಿ ವ್ಯಾಪ್ತಿಯ ಮಹಿಳಾ ಸಂಗಳ ಸದಸ್ಯರು ನಗರದ ಡಿಸಿಸಿ ಬ್ಯಾಂಕ್​ ಕೇಂದ್ರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಹಿಳಾ ಸಂರಣಾ ಸಮಿತಿ ಜಿಲ್ಲಾಧ್ಯೆ ಎಂ.ಶಶಿಕಲಾ ಜಗದೀಶ್​ ಮಾತನಾಡಿ, ವಡಗೂರು ಸೊಸೈಟಿಯ ಸುತ್ತಮುತ್ತಲಿನ ಗ್ರಾಮಗಳ ಮಹಿಳಾ ಸ್ವಸಹಾಯ ಸಂದ ಮಹಿಳೆಯರಿಗೆ ಎರಡು ವರ್ಷದಿಂದ ಉಳಿತಾಯ ಖಾತೆ ಮಾಡಿ <70 ರಿಂದ <80 ಸಾವಿರದವರೆಗೂ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕಿನಿಂದ ಲೋನ್​ ನೀಡುವುದಾಗಿ ಹೇಳಿ ಸುಮಾರು 300 ಮಹಿಳಾ ಸ್ವಸಹಾಯ ಸಂಗಳಿಂದ ಠೇವಣಿ ಪಡೆದು ಇದುವರೆಗೂ ಯಾವುದೇ ರೀತಿಯ ಸಾಲ ನೀಡದೆ ಮಹಿಳೆಯರನ್ನು ವಂಚನೆ ಮಾಡಿದ್ದು, ಇದರಿಂದ ಕುಟುಂಬಗಳಲ್ಲಿ ಕಲಹ ಉಂಟಾಗಿ, ಕೆಲವು ಹೆಣ್ಣು ಮಕ್ಕಳು ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ. ಡಿಸಿಸಿ ಬ್ಯಾಂಕ್​ ಕೂಡಲೇ ಮಹಿಳೆಯರಿಂದ ಪಡೆದಿರುವ ಠೇವಣಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇಲ್ಲದೆ ಹೋದರೆ ಮುಂಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕ್​ ಕೇಂದ್ರ ಕಚೇರಿ ಎದುರು ಅರ್ನಿದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸೊಸೈಟಿ ಅಧ್ಯ ನಾರಾಯಣಸ್ವಾಮಿ ಮಾತನಾಡಿ, ಸಾಲಕ್ಕಾಗಿ ಮಹಿಳಾ ಸಂಗಳು ಅರ್ಜಿ ಸಲ್ಲಿಸಿದ್ದು, ಸೊಸೈಟಿಯಲ್ಲಿ ಠೇವಣಿ ಇರಿಸಿರುವ ಮೊತ್ತಕ್ಕೆ ತಕ್ಕಂತೆ ಸಾಲ ನೀಡಿ, ಇಲ್ಲದಿದ್ದರೆ ಠೇವಣಿ ಹಣ ವಾಪಸ್​ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳ ಕಾರ್ಯವೈಖರಿಯೇ ಕಾರಣ ಎಂದು ಆರೋಪಿಸಿದರು. ವಿವಿಧ ಸಂಗಳ ಸದಸ್ಯರಾದ ಜ್ಯೋತಿ, ಅರುಣಾ, ಶಿಲ್ಪಾ, ಸುನಂದಮ್ಮ ಮತ್ತಿತರರು ಇದ್ದರು.