ಶಿವಮೊಗ್ಗ ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಎಚ್.ಎಸ್.ಕಿರಣ್‌ಕುಮಾರ್, ಕವಿತಾ, ಡಿ.ಜೀವನ್, ಕೃಷ್ಣಪ್ಪ, ಮಾಲತೇಶ್, ಸಂತೋಷ, ಮಂಜುನಾಥ್ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಇಎಸ್‌ಐ ಡಿಸ್ಪೆನ್ಸರಿಗಳಿಗೆ ಸೌಕರ್ಯ ಒದಗಿಸುವಂತೆ ಒತ್ತಾಯ

ಶಿವಮೊಗ್ಗ: ನಗರದಲ್ಲಿರುವ ಮೂರು ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಅವ್ಯವಸ್ಥೆ ಸರಿಪಡಿಸಬೇಕು. ಸಮರ್ಪಕ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ನಿಗದಿತ ಸಮಯಕ್ಕೆ ಬಾಗಿಲು ತೆರೆಯುವುದಿಲ್ಲ. ಸಂಜೆಯೂ ಬೇಗ ಮುಚ್ಚಲಾಗುತ್ತದೆ. ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ. ಡಿಸ್ಪೆನ್ಸರಿ ಮುಖ್ಯದ್ವಾರ, ಹೊರ ರೋಗಿ ವಿಭಾಗ ಹಾಗೂ ಔಷಧ ಉಗ್ರಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿದರು.

ರನ್ನಿಂಗ್ ಲೇಟರ್ ನೀಡುವಲ್ಲಿ ಅವ್ಯವಸ್ಥೆಯಾಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಡಿಸ್ಪೆನ್ಸರಿಗಳಲ್ಲಿ ಆಸನಗಳು, ಕುಡಿಯುವ ನೀರು, ಶೌಚಗೃಹ, ಇಲ್ಲಿ ಕೆಲಸ ಮಾಡುವವರಿಗೆ ಬಯೋಮೆಟ್ರಿಕ್ ಇಲ್ಲ ಎಂದು ದೂರಿದರು.

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಡಿ.ಜೀವನ್, ಮಾಲತೇಶ್, ಮಂಜುನಾಥ್, ರಾಮು, ಸಂತೋಷ, ನಾಗರಾಜ್, ಕವಿತಾ, ಕೃಷ್ಣಪ್ಪ ಇತರರಿದ್ದರು.