ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿ ಸುವಂತೆ ಒತ್ತಾಯಿಸಿ ಗುರುವಾರ ಸಿದ್ದಯ್ಯನಪುರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ ಸದಸ್ಯರು ತಾಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಸೀಲ್ದಾರ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. 
ನ್ಯೂಸ್

ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಒತ್ತಾಯ

ಕೊಳ್ಳೇಗಾಲ: ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಸಿದ್ದಯ್ಯನಪುರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ ಆಗ್ರಹಿಸಿತು.

ಗುರುವಾರ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೆರವಣಿಗೆ ಮೂಲಕ ತಾಲೂಕು ಕಚೇರಿ ತಲುಪಿ ಗ್ರೇಡ್-2 ತಸೀಲ್ದಾರ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಕುರುಬ ಸಮುದಾಯದ ಜನರು ಶತಮಾನಗಳಿಂದ ಕುರಿ ಸಾಕಾಣಿಕೆ, ಕೃಷಿ ಮತ್ತು ಗ್ರಾಮೀಣ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಂದಿಗೂ ನಾವು ಸಾಮಾಜಿಕ ಮತ್ತು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಕುರುಬ ಸಮು ದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಲಿಂಗರಾಜು, ಬಸವರಾಜು, ನಾಗೇಂದ್ರ, ಕಾರ್ಯದರ್ಶಿ ಮನೋಜ್, ಖಜಾಂಜಿ ಕಾರ್ತಿಕ್(ಪುಟ್ಟು), ಶಾಂತರಾಜು, ನಗರಸಭೆ ನಾಮನಿರ್ದೇಶಿತ ಸದಸ್ಯ ಶಿವಮಲ್ಲು, ಮುಖಂಡ ಪೋಸ್ಟ್ ರಾಜಣ್ಣ, ಯಜಮಾನರಾದ ಚಿಕ್ಕಮಾದೇಗೌಡ, ನಾಗೇಂದ್ರ, ಬಸವರಾಜು, ಜಯಶಂಕರ್, ಕೆಂಪರಾಜು, ಮುಳ್ಳೂರು ರಾಚೇಗೌಡ ಮತ್ತಿತರಿದ್ದರು.