ಸೆಲ್ವರಾಜ್ 
ನ್ಯೂಸ್

ಶಾಸಕ ಎಆರ್‌ಕೆಗೆ ಸಚಿವ ಸ್ಥಾನ ನೀಡಲು ಒತ್ತಾಯ

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಎಂದು ಕ್ರೈಸ್ತ ಮುಖಂಡ ಹಾಗೂ ನಗರಸಭೆ ಮಾಜಿ ನಗರಸಭೆ ಅಧ್ಯಕ್ಷ ಜಿ.ಸೆಲ್ವರಾಜು ಒತ್ತಾಯಿಸಿದ್ದಾರೆ.

ಎ.ಆರ್.ಕೃಷ್ಣಮೂರ್ತಿ ಅವರ ತಂದೆ ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರು ಸಚಿವರಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂತೆಯೇ, ಎ.ಆರ್.ಕೃಷ್ಣಮೂರ್ತಿ ಅವರು ಸಹ ಅವರ ತಂದೆಯವರ ಹಾದಿಯಲ್ಲಿ ಜನ ಸೇವೆ ಮಾಡುತ್ತಿದ್ದಾರೆ. ರಾಜಕೀಯವಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಕಳಂಕ ರಹಿತ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಅವರ ಆಲೋಚನೆ ಹೆಚ್ಚಾಗಿದೆ. ಕ್ರೈಸ್ತ ಸಮುದಾಯದ ನಾಯಕರು ಅವರೊಟ್ಟಿಗಿದ್ದಾರೆ. ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ ಎಂದು ಇತ್ತೀಚೆಗೆ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ವೇಳೆ ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟದ ಗೌರವಾಧ್ಯಕ್ಷ ಎ.ವಿನ್ಸೆಂಟ್, ನಗರಸಭೆ ನಾಮನಿರ್ದೇಶಿತ ಸದಸ್ಯ ದೇವಾನಂದ್ (ಜೋಷಿ), ತಾಲೂಕು ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟದ ಗೌರವಾಧ್ಯಕ್ಷ ಎ.ವಿನ್ಸೆಂಟ್, ಕಾರ್ಯದರ್ಶಿ ಸದಾನಂದ ಸಾಧು, ಹಿರಿಯ ಉಪಾಧ್ಯಕ್ಷ ಟಿ.ಜಾನ್ ಪೀಟರ್, ಉಪಾಧ್ಯಕ್ಷ ಎಸ್.ವಿಲ್ಸನ್ ಸಾಧು, ಜಂಟಿ ಕಾರ್ಯದರ್ಶಿ ಆರ್.ಕಾಂತರಾಜು, ಸದಸ್ಯ ಎಲಿಸ್ ಬಾಬು, ಸುದರ್ಶನ್, ಮತ್ತಿತರರಿದ್ದರು.