ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲೂ ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಗ್ರಾಮಗಳ ಎಂಪಿಸಿಎಸ್ ಅಧ್ಯಕ್ಷರು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಮನವಿ ಸಲ್ಲಿಸಿದರು.  
ನ್ಯೂಸ್

ಕೋಚಿಮುಲ್ ಚುನಾವಣೆ ನಡೆಸಲು ಆಗ್ರಹ

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲೂ ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಗ್ರಾಮಗಳ ಹಾಲು ಸಹಕಾರ ಸಂಘಗಳ ಅಧ್ಯಕ್ಷರು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಒಕ್ಕೂಟದ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಹೈನೋದ್ಯಮವು ರೈತರ ಜೀವನಾಡಿಯಾಗಿದ್ದು, ಈ ಸಂಸ್ಥೆಯಲ್ಲಿ ಅಧಿಕಾರದಲ್ಲಿರುವವರು ರೈತರ ಹಿತಕಾಯುವುದು ಬಿಟ್ಟು ಸ್ವಂತ ಅಭಿವೃದ್ಧಿ ಹೊಂದುತ್ತಿದ್ದಾರೆ. ಅಧ್ಯಕ್ಷರಿಗೆ, ನಿರ್ದೇಶಕರ ಆಸ್ತಿ ಅಭಿವೃದ್ಧಿ ಆಗಿದೆ ಹೊರತು, ಹಾಲು ಉತ್ಪಾದಕರು ಸಂಕಷ್ಟದ ಪರಿಸ್ಥಿತಿಯಲ್ಲೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅವಽ ಮುಗಿದಿರುವುದರಿಂದ ಆಡಳಿತ ಮಂಡಳಿಯು ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಲು ಅಽಕಾರವಿರುವುದಿಲ್ಲ. ಈ ಬಗ್ಗೆ ಸರ್ಕಾರವು ಸ್ಪಷ್ಟ ಆದೇಶ ಹೊರಡಿಸಿದೆ. ರಿಟರ್ನಿಂಗ್ ಅಽಕಾರಿಯಿಂದ ಕರಡು ಮತದಾರರ ಪಟ್ಟಿ ಪ್ರಕಟ, ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ಮಾ.೨೧ಕ್ಕೆ ಸ್ಥಗಿತಗೊಂಡಿದೆ. ಆ ಹಂತದಿAದಲೇ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಚುನಾವಣೆ ವಿಳಂಬವಾಗಿರುವ ಕಾರಣ ಉಚ್ಚನ್ಯಾಲಯದಲ್ಲಿ ರಿಟ್ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿ ಚುನಾವಣೆ ನಡೆಸಲು ಆದೇಶಿಸಿದೆ, ರೈತರ ಹಿತದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಕ್ರಂಪಾಷಾ, ಚುನಾವಣೆ ಸಂಬಂಧ ಸಿದ್ಧತೆ ಕೈಗೊಳ್ಳಲು ಕೋರ್ಟ್ ಆದೇಶ ನೀಡಿದೆ. ಚುನಾವಣಾ ಪ್ರಕ್ರಿಯೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿವಿಧ ಸಂಘಗಳ ಅಧ್ಯಕ್ಷರಾದ ಚಂದ್ರಶೇಖರರೆಡ್ಡಿ, ದ್ಯಾವಣ್ಣ, ನಾರಾಯಣಸ್ವಾಮಿ, ಭಾಗ್ಯಮ್ಮ, ದೊಡ್ಡನರಸಿಂಹಪ್ಪ, ರಾಜಣ್ಣ, ಗಂಗಿರೆಡ್ಡಿ ಇತರರಿದ್ದರು.

  • ಸರ್ಕಾರಿ ಕೃಪಾಪೋಷಿತ ನಾಟಕ ಮಂಡಳಿ
    ಒಕ್ಕೂಟದ ಆಡಳಿತಾವಧಿಯು ಮೇ 12ಕ್ಕೆ ಪೂರ್ಣಗೊಂಡಿದೆ. ಸದರಿ ಆಡಳಿತ ಮಂಡಳಿಯ ಅವಽಯಲ್ಲಿ ನಡೆದಿರುವ ಹಗರಣ ಮುಚ್ಚಿ ಹಾಕಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತಂದು ಮುಂದೂಡಿಕೊಂಡು ಹೋಗುತ್ತಿದೆ. ಅಧ್ಯಕ್ಷ ಕೆ.ವೈ.ನಂಜೇಗೌಡ ಮತ್ತು ನಿರ್ದೇಶಕರು ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿ ರೀತಿ ವರ್ತಿಸುತ್ತಿದ್ದಾರೆ ಎಂದು ಕೆ.ವಿ.ನಾಗರಾಜ್ ಆರೋಪಿಸಿದರು.
    ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟವು ವಿಭಜನೆಯಾಗಿ ಚಿಕ್ಕಬಳ್ಳಾಪುರ ಒಕ್ಕೂಟ ರಚನೆಯಾಗಿತ್ತು. ಕಾಂಗ್ರೆಸ್ ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ಆದೇಶ ರದ್ದುಪಡಿಸಿತು. ಬಾಗೇಪಲ್ಲಿಯಲ್ಲಿ ವಿಶೇಷ ಸರ್ವ ಸದಸ್ಯರ ಸಭೆ ಕರೆದು ಕೆಲವೇ ನಿಮಿಷಗಳಿಗೆ ಮೊಟಕುಗೊಳಿಸಿದ್ದಾರೆ. ಒಕ್ಕೂಟದ ಇತಿಹಾಸದಲ್ಲಿ ಇಂತಹ ಸಭೆ ಎಂದೂ ನೋಡಿಲ್ಲ ಎಂದು ದೂರಿದರು.