ಕೋಲಾರ: ಜಿಲ್ಲಾದ್ಯಂತ ಒತ್ತುವರಿ ಆಗಿರುವ ರಾಜಕಾಲುವೆ, ಕೆರೆ ಜಮೀನು ತೆರೆವುಗೊಳಿಸಲು ಕಂದಾಯ ಅಧಿಕಾರಿಗಳ ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವದಲ್ಲೇ ಮಳೆ ಪ್ರಾರಂಭವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲೆಯೆತ್ತಿರುವ ಶೋರೂಂ, ಕಲ್ಯಾಣ ಮಂಟಪ, ಹೋಟಲ್ ಮಾಲೀಕರು ರಾಜಕಾಲುಯನ್ನು ಒತ್ತುವರಿ ಮಾಡಿ, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಪರಿಣಾಮ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಒತ್ತುವರಿ ತೆರವು ಮಾಡುವಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ವಿಲರಾಗಿದ್ದಾರೆ ಎಂದು ಆರೋಪಿಸಿದರು.
ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕೆರೆ&ರಾಜಕಾಲುವೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಬಿಡುಗಡೆ ಆಗುತ್ತಿದ್ದರೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಯಾವ ರಾಜಕಾಲುವೆಯನ್ನೂ ಅಭಿವೃದ್ಧಿ ಪಡಿಸಿಲ್ಲ. ಗಿಡ&ಗಂಟೆಯನ್ನೂ ಕಿತ್ತಿಲ್ಲ. ಜೆಸಿಬಿಗಳ ಮುಂದೆ ೋಟೋ ತೆಗೆಸಿಕೊಂಡು, ನಾಮಪಲಕ ಅಳವಡಿಸುತ್ತಾರೆ. ಬಿಲ್ ಮಾತ್ರ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬ್ಯಾಂಕ್ ಖಾತೆಗೆ ಜಮೆ ಆಗಿರುತ್ತದೆ ಎಂದು ಆರೋಪಿಸಿದರು.
ಬಡವರ ಕಾಳಜಿ ಇದೆಯೆ?
ದೇಶದಲ್ಲಿ ಒಂದು ಕಡೆ ಯುದ್ಧದ ಪರಿಸ್ಥಿತಿ ಇದೆ. ಉಗ್ರರ ದಾಳಿಯಿಂದ ಪ್ರಾಣ ಹಾನಿ ಆಗಿರುವ ಮನೆಗಳಲ್ಲಿ ಸೂತಕ ಛಾಯೆ ಇದೆ. ಇಂತಹ ಸಂದರ್ಭಲ್ಲಿ ರಾಜ್ಯ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳಲು ಸಮಾವೇಶ ಮಾಡಿಕೊಂಡಿದೆ. ಇವರಿಗೆ ಬಡ ಜನರ ಬಗ್ಗೆ ಕಾಳಜಿ ಇದೆಯೆ...?, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು.