ಬಜೆಟ್​ನಲ್ಲಿ ಕೋಲಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ, ಕೋಲಾರ ನಗರದ ಬಸ್​ ನಿಲ್ದಾಣದಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಎತ್ತುಗಳ ಸಮೇತ ಸೋಮವಾರ ಪ್ರತಿಭಟನೆ ನಡೆಸಿದರು.  
ನ್ಯೂಸ್

ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್​ ಘೋಷಿಸಲು ಒತ್ತಾಯ

ಕಿರುವಾರ ಎಸ್.ಸುದರ್ಶನ್

ಕೋಲಾರ: ರಾಜ್ಯ ಬಜೆಟ್​ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್​ ಘೋಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು, ನಗರದ ಪಲ್ಲವಿ ವೃತ್ತದಲ್ಲಿ ಎತ್ತುಗಳ ಸಮೇತ ಪ್ರತಿಭಟನೆ ನಡೆಸಿದರು.

ಸಂದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯು ಆಂಧ್ರ, ತಮಿಳುನಾಡು ಗಡಿಯಲ್ಲಿದ್ದು, ಸ್ಥಳಿಯ ಜನಪ್ರತಿನಿಧಿಗಳ ರ್ನಿಲಕ್ಷ$್ಯಕ್ಕೆ ಒಳಗಾಗಿದೆ ಎಂದು ದೂರಿದರು.

ಇಲ್ಲಿನ ಜನಪ್ರತಿನಿಧಿಗಳಿಗೆ ಬದ್ಧತೆ ಇದಿದ್ದರೆ ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದರೆ ಸ್ವ ಹಿತಾಸಕ್ತಿಗಾಗಿ ಜನರಿಂದ ಆಯ್ಕೆಯಾಗಿರುವ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದರು. ಕೆಸಿವ್ಯಾಲಿ ಯೋಜನೆಯ ನೀರು 3ನೇ ಹಂತದ ಶುದ್ಧೀಕರಣ, ಎಪಿಎಂಸಿ ಮಾರುಕಟ್ಟೆಗೆ ಹೆಚ್ಚುವರಿ ಜಾಗ ಮಂಜೂರು ಮಾಡುವುದು, ನಕಲಿ ಬಿತ್ತನೆ ಬೀಜ, ಕೀಟ ನಾಶಕ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ಜಾರಿ ಮಾಡಬೇಕು ಎಂಬುದು ಬಹುದಿನ ಬೇಡಿಕೆಯಾಗಿದೆ. ಚುನಾವಣೆಗಳ ಮುನ್ನ ನೀಡುವ ಭರವಸೆಗಳನ್ನು ಮರೆತು ಜನಪ್ರತನಿಧಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಕೋಲಾರವು ಹೇಳಿಕೊಳ್ಳುವಷ್ಟು ಅಭಿವೃದ್ಧಿ ಹೊಂದಿಲ್ಲ. ಜಿಲ್ಲೆಯ ರೈತರು ಇಡೀ ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ತರಕಾರಿ, ರೇಷ್ಮೆ, ಹಾಲು ಉತ್ಪಾದಿಸಿಕೊಡುತ್ತಾರೆ ಎಂಬ ಹೆಗ್ಗಳಿಕೆಯಿಂದ ಹೆಸರು ಪಡೆದುಕೊಂಡಿದೆ. ಇನ್ನಾದರು ರಾಜಕೀಯ ಪಕ್ಷಗಳು ಕೋಲಾರವನ್ನು ಓಟ್​ಗೆ ಸಿಮೀತಗೊಳಿಸದೆ ಅಭಿವೃದ್ಧಿಗೂ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ವೇಮಗಲ್​ ಮಹಿಳಾ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ನಂತರ ಸ್ತ್ರೀಶಕ್ತಿ ಸಹಕಾರ ಸಂಘಗಳ ಸಾಲ ಮನ್ನಾ ಮಾಡುವ ಮಾತನ್ನು ಬಜೆಟ್​ನಲ್ಲಿ ಉಳಿಸಿಕೊಂಡು ಡಿಸಿಸಿ ಬ್ಯಾಂಕ್​ ಚುನಾವಣೆ ನಡೆಸಬೇಕು ಎಂದರು.

ಸಂದ ಮಹಿಳಾ ಟಕದ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಗಡಿಭಾಗದ ರೈತರ ನಿದ್ದೆಗೆಡಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ, ಯರಗೋಳ್​ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಜಿಲ್ಲೆಗೆ ಅನುಷ್ಠಾನಗೊಳಿಸಬೇಕು. ಕೃಷಿ ಆಧಾರಿತ ಕೃಗಾರಿಕೆಗಳು, ಮಾವು ಸಂಸ್ಕರಣಾ ಘಟಕಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ಪದಾಧಿಕಾರಿಗಳಾದ ಬಂಗವಾದಿ ನಾಗರಾಜ್​ಗೌಡ, ಶಿವಾರೆಡ್ಡಿ, ಮರಗಲ್​ ಶ್ರೀನಿವಾಸ್​, ಸುಪ್ರೀಂ ಚಲ, ಯಲ್ಲಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ ಚಂದ್ರಪ್ಪ , ಶೈಲಜ, ರಾಧಮ್ಮ, ರತ್ನಮ್ಮ, ಸುಗುಣ ಉಪಸ್ಥಿತರಿದ್ದರು.