ವರ್ಜಿನ್​ ಸೇರಿ ತನ್ನನ್ನು ಮದ್ವೆಯಾಗೋ ಹುಡುಗನಿಗೆ 11 ಅರ್ಹತೆಗಳಿರಬೇಕು: ಯುವತಿಯ ಬೇಡಿಕೆಗೆ ನೆಟ್ಟಿಗರು ಶಾಕ್​! Demand List 
ನ್ಯೂಸ್

ವರ್ಜಿನ್​ ಸೇರಿ ತನ್ನನ್ನು ಮದ್ವೆಯಾಗೋ ಹುಡುಗನಿಗೆ 11 ಅರ್ಹತೆಗಳಿರಬೇಕು: ಯುವತಿಯ ಬೇಡಿಕೆಗೆ ನೆಟ್ಟಿಗರು ಶಾಕ್​! Demand List

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಪತಿಯಾಗುವವನಿಗೆ 11 ಕಠಿಣ ರೂಲ್ಸ್ ಹಾಕಿದ ಯುವತಿಯ ಪೋಸ್ಟ್ ವೈರಲ್!
  • ಭಾವಿ ಪತಿಯ ಅರ್ಹತೆ ಪಟ್ಟಿ ಮಾಡಿದ ಯುವತಿಗೆ ನೆಟ್ಟಿಗರ ತರಾಟೆ
  • ಮದುವೆ ಹೆಸರಲ್ಲಿ ಇಂತಹ ಗುಲಾಮಗಿರಿ ಒಪ್ಪಲ್ಲ ಎಂದ ನೆಟ್ಟಿಗರು
Demand List : ತನ್ನ ಪತಿಯಾಗುವವನಿಗೆ ಇರಬೇಕಾದ ಅರ್ಹತೆಗಳ ಕುರಿತು ಯುವತಿಯೊಬ್ಬಳು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ವೇದಿಕಾ ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿರುವ ಪೋಸ್ಟ್‌ನಲ್ಲಿ ಯುವತಿ ತನ್ನನ್ನು ಮದುವೆಯಾಗುವ ಹುಡುಗನಿಗೆ ಇರಬೇಕಾದ 11 ಕಟ್ಟುನಿಟ್ಟಿನ ಅರ್ಹತೆಗಳನ್ನು ಪಟ್ಟಿ ಮಾಡಿದ್ದು, ಇದನ್ನು ನೋಡಿ ಸಾಮಾಜಿಕ ಜಾಲತಾಣದ ಬಳಕೆದಾರರು ಶಾಕ್ ಆಗಿದ್ದಾರೆ.
ತನ್ನ ಪೋಸ್ಟ್‌ನಲ್ಲಿ ತನ್ನನ್ನು ಮದುವೆಯಾಗುವ ಯುವಕನಲ್ಲಿ ಇರಬೇಕಾದ ಗುಣಗಳನ್ನು ವಿವರವಾಗಿ ಬರೆದುಕೊಂಡಿರುವ ವೇದಿಕಾ, ಈ ಎಲ್ಲಾ ಮಾನದಂಡಗಳನ್ನು ಹೊಂದಿರುವ ವ್ಯಕ್ತಿ ನನಗೆ ಎಲ್ಲಿ ಸಿಗಬಹುದು? ಎಂದು ನೆಟ್ಟಿಗರನ್ನೇ ಪ್ರಶ್ನಿಸಿದ್ದಾಳೆ.
ನಾನು ಮದುವೆಯಾಗಲಿರುವ ಪುರುಷ ಹೀಗಿರಬೇಕು ಎಂದು ಆರಂಭವಾಗುವ ಈ ವಿಲಕ್ಷಣ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆಕೆ ವಿಧಿಸಿರುವ ಮೊದಲ ನಿಬಂಧನೆಯಂದರೆ ತನ್ನ ಭಾವಿ ಪತಿ ಕಡ್ಡಾಯವಾಗಿ ಬ್ರಹ್ಮಚಾರಿಯಾಗಿರಬೇಕು ಎಂಬುದು. ಇನ್ನುಳಿದಂತೆ ಆತನ ತಿಂಗಳ ಆದಾಯ ಕನಿಷ್ಠ 2 ಲಕ್ಷ ರೂಪಾಯಿ ಇರಬೇಕು. ಇದರೊಂದಿಗೆ ಆತ ನೋಡಲು ಸುಂದರನಾಗಿರಬೇಕು, 6 ಅಡಿ ಎತ್ತರ ಇರಬೇಕು, ಅಡುಗೆ ಮಾಡಲು ಗೊತ್ತಿರಬೇಕು, ಮಹಿಳಾ ದ್ವೇಷಿಯಾಗಿರಬಾರದು, ಯಾವುದೇ ಸೋಷಿಯಲ್ ಮೀಡಿಯಾ ಬಳಸಬಾರದು ಹಾಗೂ ಯಾವುದೇ ಮಹಿಳಾ ಸ್ನೇಹಿತರನ್ನು ಹೊಂದಿರಬಾರದು ಎಂದು ಆಕೆ ಪಟ್ಟಿ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತ ಎಲ್ಲಿಗೆ ಹೋದರೂ ತನಗೇ ಹೇಳಿ ಅನುಮತಿ ಪಡೆಯಬೇಕು, ತನ್ನ ಲೈವ್ ಲೊಕೇಶನ್ ಅನ್ನು ಸದಾ ಹಂಚಿಕೊಳ್ಳುತ್ತಿರಬೇಕು ಮತ್ತು ತನ್ನನ್ನು ವಿದೇಶಿ ಪ್ರವಾಸಗಳಿಗೆ ಕರೆದೊಯ್ಯಬೇಕು ಎಂದು ಬರೆದುಕೊಂಡಿರುವ ಯುವತಿ, ಇಂತಹ ಪುರುಷ ನನಗೆ ಎಲ್ಲಿ ಸಿಗುತ್ತಾನೆ ಎಂದು ಕೇಳಿದ್ದಾಳೆ.

11 ಅರ್ಹತೆಗಳ ಪಟ್ಟಿ ಇಲ್ಲಿದೆ...

* ಕಡ್ಡಾಯವಾಗಿ ಬ್ರಹ್ಮಚಾರಿಯಾಗಿರಬೇಕು

* ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರಬೇಕು

* ಯಾವುದೇ ಕೃತಕತೆ ಇಲ್ಲದೆ ಸ್ವಾಭಾವಿಕವಾಗಿ ಸುಂದರನಾಗಿರಬೇಕು

* 6 ಅಡಿ ಎತ್ತರವಿರುವ ಪರಿಪೂರ್ಣ ವ್ಯಕ್ತಿತ್ವ ಹೊಂದಿರಬೇಕು

* ಅಡುಗೆ ಮಾಡಲು ಕಡ್ಡಾಯವಾಗಿ ಗೊತ್ತಿರಬೇಕು

* ಮಹಿಳೆಯರನ್ನು ಗೌರವಿಸುವವನಾಗಿರಬೇಕು ಮತ್ತು ಮಹಿಳಾ ದ್ವೇಷಿಯಾಗಿರಬಾರದು

* ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರಬಾರದು

* ಯಾವುದೇ ಮಹಿಳಾ ಗೆಳತಿಯರು ಇರಬಾರದು

* ಎಲ್ಲಿಗೇ ಹೋಗುವುದಿದ್ದರೂ ಮುಂಚಿತವಾಗಿ ಹೆಂಡತಿಯ ಅನುಮತಿ ಪಡೆಯಬೇಕು

* ದಿನದ 24 ಗಂಟೆಯೂ (24×7) ತನ್ನ ಲೈವ್ ಲೊಕೇಶನ್ ಅನ್ನು ಹಂಚಿಕೊಳ್ಳುತ್ತಿರಬೇಕು

* ತನ್ನನ್ನು ನಿಯಮಿತವಾಗಿ ವಿದೇಶಿ ಪ್ರವಾಸಗಳಿಗೆ ಕರೆದೊಯ್ಯಬೇಕು
ಯುವತಿಯ ಈ ಅತಿಯಾದ ನಿರೀಕ್ಷೆಗಳ ಪಟ್ಟಿ ವೈರಲ್ ಆಗುತ್ತಿದ್ದಂತೆ, ಸಾವಿರಾರು ನೆಟ್ಟಿಗರು ಆಕೆಯ ಬೇಡಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಕಮೆಂಟ್ ಮಾಡಿರುವ ಬಳಕೆದಾರರೊಬ್ಬರು, ಈ ರೀತಿ ಭಿಕ್ಷೆ ಬೇಡುವ ಬದಲು, ಮೊದಲು ನಿಮ್ಮ ಯೋಗ್ಯತೆ ಏನೆಂಬುದನ್ನು ಸಾಬೀತುಪಡಿಸಿ. ನಿಮ್ಮಂತಹ ಮಹಿಳೆ ಯಾರಿಗೆ ತಾನೇ ಬೇಕು? ನಿಮ್ಮ ಈ ದುರಾಶೆಯು ಹೆಂಡತಿಯ ಮುಖವಾಡದ ಹಿಂದೆ ಅಡಗಿರುವ 'ರಕ್ತ ಹೀರುವ ಜಿಗಣೆ'ಯನ್ನು ತೋರಿಸುತ್ತಿದೆ, ಪುರುಷರೇ ಎಚ್ಚರ! ಎಂದು ತೀಕ್ಷ್ಣವಾಗಿ ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ಆಕೆಯ ಬೇಡಿಕೆಗಳನ್ನು ವ್ಯಂಗ್ಯವಾಡುತ್ತಾ, ನಿಮಗೆ ಬೇಕಾಗಿರುವುದು ಗಂಡನಲ್ಲ, ಬದಲಿಗೆ ನಿಮಗೆ ಬ್ರಹ್ಮಚಾರಿಯಾಗಿರುವ ಒಂದು ಎಟಿಎಂ ಮಿಷನ್, 6 ಅಡಿ ಎತ್ತರದ ಬಾಡಿಗಾರ್ಡ್, ಒಬ್ಬ ಪರ್ಸನಲ್ ಅಡುಗೆಯವನು, ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಬಹುದಾದ ಕೆಲಸದಾಳು, ವಿದೇಶಿ ಪ್ರವಾಸ ಪ್ರಾಯೋಜಿಸುವ ಸ್ಪಾನ್ಸರ್ ಮತ್ತು ಯಾವುದೇ ಸಾಮಾಜಿಕ ಜೀವನವಿಲ್ಲದ ಒಬ್ಬ ವ್ಯಕ್ತಿ ಬೇಕಾಗಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು 'ಇಂತಹ ಪುರುಷ ಎಲ್ಲಿ ಸಿಗುತ್ತಾನೆ?' ಎಂದು ಕೇಳುವ ಆಕೆಯ ಪ್ರಶ್ನೆಗೆ ಉತ್ತರಿಸಿರುವ ನೆಟ್ಟಿಗರು, ಇಂತಹ ಪುರುಷ ಜಗತ್ತಿನಲ್ಲಿ ಎಲ್ಲೂ ಸಿಗುವುದಿಲ್ಲ, ಏಕೆಂದರೆ ಸ್ವಾಭಿಮಾನವಿರುವ ಯಾವುದೇ ಪುರುಷ ಮದುವೆಯ ಹೆಸರಿನಲ್ಲಿ ಇಂತಹ ಸಂಬಳವಿಲ್ಲದ ಗುಲಾಮಗಿರಿಗೆ ಒಪ್ಪಿಕೊಳ್ಳುವುದಿಲ್ಲ. ಮದುವೆ ಎಂಬುದು ಇಬ್ಬರ ನಡುವಿನ ಪರಸ್ಪರ ಪಾಲುದಾರಿಕೆ ಎಂಬುದು ನೆನಪಿನಲ್ಲಿರಲಿ ಎಂದು ಕಮೆಂಟ್ ಮಾಡುವ ಮೂಲಕ ಆಕೆಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ, (ಏಜೆನ್ಸೀಸ್​).