ನ್ಯೂಸ್

ಬೇಡಿಕೆ ಈಡೇರಿಸದಿದ್ದರೆ ನಿರಂತರ ಧರಣಿ ಎಚ್ಚರಿಕೆ; ಮಹಿಳೆಯರಿಂದ ಮನವಿ ಸಲ್ಲಿಕೆ

Haveri - Kariyappa Aralikatti

ರಾಣೆಬೆನ್ನೂರ: ತಾಂಡಾದ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿರುವ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶಾಂತ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್​ ನೀಡಬೇಕು. 15 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ತಹಸೀಲ್ದಾರ್​ ಕಚೇರಿ ಎದುರು ನಿರಂತರ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿ ಸಂತ್ರಸ್ತ ಮಹಿಳೆಯರು ಸೋಮವಾರ ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಹಿಳೆಯರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳುವ ಸಲುವಾಗಿ ಹಲವಾರು ವರ್ಷಗಳಿಂದ ಪ್ರತಿಭಟನೆ ಧರಣಿ ನಡೆಸಿದರೂ ಯಾರೋಬ್ಬರು ಸ್ಪಂದಿಸಿಲ್ಲ. ಈವರೆಗೆ ಸಿಎಂ, ಮಾಜಿ ಸಿಎಂ ಸೇರಿ ಪ್ರತಿಯೊಬ್ಬ ಆರೋಗ್ಯ ಇಲಾಖೆ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೇರಿ ಎಲ್ಲರಿಗೂ ಮನವಿ ಪತ್ರ ಕೊಟ್ಟು ಸಾಕಾಗಿ ಹೋಗಿದೆ. ಆದ್ದರಿಂದ ನಮಗೆ ನ್ಯಾಯ ಒದಗಿಸಿಕೊಡುವವರೆಗೂ ನಿರಂತರ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಪ್ರಮುಖರಾದ ಲಕ್ಷ$್ಮವ್ವ ಲಮಾಣಿ, ಗಂಗಮ್ಮ ಲಮಾಣಿ, ಜಗದೀಶ ಕೆರೂಡಿ, ಬೀರಪ್ಪ ಲಮಾಣಿ, ಆನಂದ ಲಮಾಣಿ, ಮಂಜಪ್ಪ ಶಂಭೋಜಿ, ನಾಗರಾಜ ಬಣಕಾರ, ಮಲ್ಲೇಶ ದಾನಮ್ಮನವರ, ಹಾಲೇಶ ಗುಳ್ಳಾಪುರ, ಚಂದ್ರಪ್ಪ ಮಾದರ, ಜಗದೀಶ ಕರ್ಜಗಿ ಮತ್ತಿತರರು ಉಪಸ್ಥಿತರಿದ್ದರು.