ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾವು ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ ಚಿನ್ನಪ್ಪ ರೆಡ್ಡಿ ಮಾತನಾಡಿದರು. ಶ್ರೀನಿವಾಸರೆಡ್ಡಿ, ನವೀನ್​ ಕುಮಾರ್​, ಈರಪ್ಪ ರೆಡ್ಡಿ ಇದ್ದರು.  
ನ್ಯೂಸ್

ಟನ್​ಗೆ 15,000 ನಿಗದಿಗೆ ಒತ್ತಾಯ

ಕೋಲಾರ: ಒಂದು ಟನ್​ ಮಾವಿಗೆ 15 ಸಾವಿರ ರೂ. ಬೆಲೆ ನಿಗದಿಪಡಿಸಿ ರಾಜ್ಯ ಸರ್ಕಾರವು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಮಾವು ಬೆಳೆಗಾರರ ಸಂದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯಕ್ಕೆ ಟೊಮ್ಯಾಟೊ, ಮಾವು ಬೆಳೆಗಾರರು ಬೀದಿ ಪಾಲಾಗುತ್ತಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ನೆರವಿಗೆ ಧಾವಿಸುವಲ್ಲಿ ವಿಲರಾಗಿದ್ದಾರೆ ಎಂದು ದೂರಿದರು.

ಯಾವುದೇ ಅಧಿಕಾರಿಗಳಿಂದ ಅನುಮತಿ ಪಡಯದೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಅನಿವಾರ್ಯವಾದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಸಹ ಹಿಂದೆ ಹೋಗುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ಕೋಮುಲ್​, ಡಿ.ಸಿ.ಸಿ ಬ್ಯಾಂಕ್​ ಚುನಾವಣೆಗಳಲ್ಲಿ ಅಭ್ಯರ್ಥಿಗಳ

ನಾಮಪತ್ರ ಸಲ್ಲಿಸುವ ಬ್ಯುಸಿಯಲ್ಲಿದ್ದಾರೆ. ಅದೇ ಮಾವು ಬೆಳೆಗಾರರ ಸಮಸ್ಯೆಗೆ ಆಸಕ್ತಿ ತೋರಿಲ್ಲ ಎಂದು ಕುಟಕಿದ ಅವರು, ಜನ್ರತಿನಿಧಿಗಳೇ ಚುನಾವಣೆ ಮೇಲೆ ಇರುವ ಪ್ರೀತಿ ಮಾವು ಬೆಳೆಗಾರರ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದರು.

* ಸಾಮೂಹಿಕ ರಾಜೀನಾಮೆಗೆ ಒತ್ತಾಯ

ಶಾಸಕ ಕೆ.ವೈ.ನಂಜೇಗೌಡ ಸೇರಿ ಇತರೆ ಶಾಸಕರಿಗೆ ಮಾವು ಬೆಳೆಗಾರರ ನಿಯೋಗವನ್ನು ಸಿಎಂ ಬಳಿಗೆ ಕರೆದೊಯ್ದು ಭೇಟಿ ಮಾಡಿಸಿ ಬೆಂಬಲ ಬೆಲೆ ಘೋಷಿಸುವಂತೆ ಒತ್ತಡ ಹಾಕಿಸುವ ತಾಕತ್ತು ಇಲ್ಲವಾಗಿದೆ. ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಶಾಸಕ ಕೊತ್ತೂರು ಮಂಜುನಾಥ್​ ಬೆಳಗ್ಗೆ ಟಿಫನ್​, ಮಧ್ಯಾಹ್ನ ಊಟ, ರಾತ್ರಿ ಮಲಗಲು ಹೊರ ರಾಜ್ಯಗಳಿಗೆ ಹೋಗುವ ನೀವು ಮಾವು ಬೆಳೆಗಾರರು ಮತಹಾಕಿಲ್ಲ ಎನ್ನುವ ದೃಷ್ಟಿಯಲ್ಲಿ ಬೆಳೆಗಾರರ ಪರ ನಿಲ್ಲದಿರುವುದು ಎಷ್ಟರಮಟ್ಟಿಗೆ ಸರಿ?. ಶಾಸಕ ಸಮೃದ್ಧಿ ಮಂಜುನಾಥ್​ ಅವರ ಕ್ಷೇತ್ರದಲ್ಲಿ ಮಾವು ಬೆಳೆಗಾರರು ಹೆಚ್ಚಾಗಿದ್ದಾರೆ. ಆದರೂ ಮಾವು ಬೆಳೆಗಾರರ ಕಷ್ಟ ನಿಮ್ಮ ಕಣ್ಣಿಗೆ ಬೀಳಲಿಲ್ಲವೇ ಎಂದು ಚಿನ್ನಪ್ಪರೆಡ್ಡಿ ಅಸಮಧಾನ ವ್ಯಕ್ತಪಡಿಸಿದರು.

* ಮೂರ್ಖರನ್ನಾಗಿಸುವ ಹುನ್ನಾರ

ರೈತರ ವಿಚಾರದಲ್ಲಿ ಆಂಧ್ರ ಸರ್ಕಾರವು ಕೂಡಲೇ ಧಾವಿಸುತ್ತದೆ. ಆದರೆ ಕರ್ನಾಟಕ ಸರ್ಕಾರವು ಕಾಳಜಿ ತೋರುತ್ತಿಲ್ಲ. ಬೆಂಬಲ ಬೆಲೆ ಘೋಷಣೆಗೆ ಸಿದ್ದರಾಮಯ್ಯ ಅವರು ಕ್ರಮಕೈಗೊಳ್ಳಬಹುದು. ಆದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಆಲೋಚನೆ ಸರಿಯಲ್ಲ. ಇದು ರೈತರನ್ನು ಮೂರ್ಖರನ್ನಾಗಿಸುವ ಹುನ್ನಾರವಾಗಿದೆ. ಕೂಡಲೇ ಆಂಧ್ರ ಮಾದರಿಯಲ್ಲಿ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ಪರ ನಿಲ್ಲಬೇಕು ಎಂದು ಚಿನ್ನಪ್ಪರೆಡ್ಡಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಈರಪ್ಪರೆಡ್ಡಿ, ನವೀನ್​ ಕುಮಾರ್​, ಬೆಲ್ಲಂ ಶ್ರೀನಿವಾಸ್​, ದೇವರಾಜ್​, ನಾರಾಯಣಸ್ವಾಮಿ, ಆರ್​.ವೆಂಕಟೇಶ್​, ಸೈಯದ್​ ಇದ್ದರು.