ಶಿವಮೊಗ್ಗಕ್ಕೆ ಆಗಮಿಸಿದ್ದ ಕಿತ್ತೂರು ಉತ್ಸವ&2024ರ ವಿಜಯಜ್ಯೋತಿ ರಥಯಾತ್ರೆಯನ್ನು ಎಸ್​.ಎನ್​.ಚನ್ನಬಸಪ್ಪ ಚಿಕ್ಕಮಗಳೂರಿಗೆ ಬೀಳ್ಕೊಟ್ಟರು. ಎಚ್​.ಉಮೇಶ್​, ಎಂ.ಎನ್​.ಸುಂದರರಾಜ್​, ರುದ್ರಮುನಿ ಸಜ್ಜನ್​, ಸಿದ್ದಪ್ಪ ಇತರರಿದ್ದರು.  
ನ್ಯೂಸ್

ಚನ್ನಮ್ಮಾಜಿ ವೀರಗಾಥೆ ಮನೆಮನೆಗೆ ತಲುಪಿಸಿ

ಶಿವಮೊಗ್ಗ: ಕಿತ್ತೂರು ರಾಣಿ ಚನ್ನಮ್ಮಾಜಿ ಅಂದು ನಾಡನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸೆಣಸಾಡಿ ವೀರೋಚಿತ ಗೆಲುವು ಸಾಧಿಸಿದ 200ನೇ ವರ್ಷದ ಸವಿನೆನಪಿಗಾಗಿ ನಾಡಿನೆಲ್ಲೆಡೆ ರಥಯಾತ್ರೆ ಸಂಚರಿಸುತ್ತಿದೆ. ಅವರ ಹೋರಾಟದ ದಿನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಎಸ್​.ಎನ್​.ಚನ್ನಬಸಪ್ಪ ಹೇಳಿದರು.

ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ ಕಿತ್ತೂರು ಉತ್ಸವ&2024ರ ವಿಜಯಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ಮುಂದಿನ ಪ್ರಯಾಣಕ್ಕೆ ಬೀಳ್ಕೊಡುವ ಮುನ್ನ ಮಾತನಾಡಿದ ಅವರು, ರಥಯಾತ್ರೆ ನಾಡಿನೆಲ್ಲೆಡೆ ಸಂಚರಿಸಿ, ಜನಸಾಮಾನ್ಯರಲ್ಲಿ ರಾಣಿ ಚನ್ನಮ್ಮ ಅವರ ಯಶೋಗಾಥೆ, ಜೀವನ ಚರಿತ್ರೆ ತಿಳಿಸುವ ಹಾಗೂ ಸಂದೇಶವನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.
ಕಿತ್ತೂರು ರಾಣಿಯನ್ನು ನಾಡಿನ ಸ್ವಾಭಿಮಾನದ ಸಂಕೇತವಾಗಿ ಗುರುತಿಸಲಾಗುತ್ತಿದೆ. ಬ್ರಿಟಿಷರು ಜಾರಿಗೆ ತಂದಿದ್ದ ತೆರಿಗೆ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಅವರು ವಿರೋಧಿಸಿದ್ದರು. ಪ್ರಜೆಗಳು ಇದನ್ನು ಅನುಸರಿಸಬಾರದು ಎಂದು ಕರೆ ನೀಡಿದ್ದರು. ಸಂಗೊಳ್ಳಿ ರಾಯಣ್ಣನಂತ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದ ಪರಾಕ್ರಮಿ ಚನ್ನಮ್ಮಾಜಿ ಸೈನ್ಯದಲ್ಲಿ ಇದ್ದುದ್ದನ್ನು ಸ್ಮರಿಸಬೇಕು ಎಂದರು.
ರಥಯಾತ್ರೆಯನ್ನು ಚಿಕ್ಕಮಗಳೂರಿಗೆ ಬೀಳ್ಕೊಡಲಾಯಿತು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್​.ಉಮೇಶ್​, ವೀರಶೈವ ಮಹಾಸಭಾ ಜಿಲ್ಲಾಧ್ಯ ರುದ್ರಮುನಿ ಸಜ್ಜನ್​, ಕರ್ನಾಟಕ ಸಂದ ಮಾಜಿ ಅಧ್ಯ ಎಂ.ಎನ್​.ಸುಂದರರಾಜ್​, ಪ್ರಮುಖರಾದ ಸಿದ್ದಪ್ಪ, ಚಂದ್ರಶೇಖರ್​ ತಲಗಿಹಾಳ ಇತರರಿದ್ದರು.