ನವದೆಹಲಿ: ಇಬ್ಬರು ಸಹೋದರಿಯರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ಬಂಧಿತರನ್ನು ಕಿಶನ್ ಚೌಧರಿ (27) ಮತ್ತು ಗಣೇಶ್ ಸ್ವಾಮಿ (39) ಎಂದು ಗುರುತಿಸಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಒಟ್ಟು 5 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಈ ಹಿಂದೆ ಪ್ರಕರಣ ಸಂಬಂಧ ಅರ್ಜುನ್, ಮಿಕಲ್ ಮತ್ತು ದೇವ್ ಅವರನ್ನು ಬಂಧಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ದೆಹಲಿ ಪೊಲೀಸರು. ನವದೆಹಲಿ ಆರ್ಕೆ ಪುರಂನಲ್ಲಿ ಇಬ್ಬರು ಮಹಿಳೆಯರ ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಐವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
12 ಮಂದಿ ಯುವಕರು ಅಂಬೇಡ್ಕರ್ ಬಸ್ತಿಯಲ್ಲಿರುವ ನಿವಾಸಕ್ಕೆ ನುಗ್ಗಿ, ಲಲಿಲ್ಗಾಗಿ ಹುಡುಕುತ್ತಿದ್ದರು. ಲಲಿತ್ ತಪ್ಪಿಸಿಕೊಂಡು ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಅವರ ಸಹೋದರಿಯರಾದ. ಪಿಂಕಿ ಮತ್ತು ಜ್ಯೋತಿ ಎಂಬ ಇಬ್ಬರು ಸಹೋದರಿಯರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.