ನ್ಯೂಸ್

ವಿದೇಶ ಪ್ರಯಾಣ ಮಾಡಿರದ ವ್ಯಕ್ತಿಯಲ್ಲೂ ಕಂಡುಬಂತು ಮಂಕಿಪಾಕ್ಸ್​: ದೇಶದಲ್ಲಿ ಈವರೆಗೆ ನಾಲ್ವರಿಗೆ ಸೋಂಕು!

mahalakshmihm

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ದಾಖಲಾಗಿದೆ. ಯಾವುದೇ ಪ್ರಯಾಣದ ಹಿನ್ನಲೆ ಹೊಂದಿರದ ವ್ಯಕ್ತಿಯಲ್ಲೂ ಈ ಸೋಂಕು ಕಂಡುಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಈವರೆಗೂ ಕೇರಳ ರಾಜ್ಯದಲ್ಲಿ ಮಾತ್ರ ಕಂಡುಬಂದಿದ್ದ ಮಂಕಿಪಾಕ್ಸ್​ ಸೋಂಕು ಇದೀಗ ದೆಹಲಿಯಲ್ಲೂ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದರಲು ಆರೋಗ್ಯ ಇಲಾಖೆ ಸೂಚಿಸಿದೆ.

ಕೇರಳದಲ್ಲಿ ಕಂಡುಬಂದಿರುವ ಮೂವರೂ ವ್ಯಕ್ತಿಗಳು ವಿದೇಶದಿಂದ ಬಂದವರೇ ಆಗಿದ್ದಾರೆ. ಹಾಗಾಗಿ ವಿದೇಶದಿಂದ ಬಂದವರ ಮೇಲೆ ಮಾತ್ರ ನಿಗಾ ವಹಿಸಲಾಗಿತ್ತು. ಇದೀಗ ಸ್ಥಳೀಯ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿರುವುದರಿಂದ ಆರೋಗ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್​)