ನ್ಯೂಸ್

ದೆಹಲಿ ಹಾಗೂ ಗಾಜಿಯಾಬಾದ್​ ನಡುವಿನ ಸಂಚಾರ ಸಂಪೂರ್ಣ ಬಂದ್​: ಹಲವು ಪ್ರದೇಶಗಳು ಸೀಲ್​ಡೌನ್​

ನವದೆಹಲಿ: ದೆಹಲಿ ಹಾಗೂ ಗಾಜಿಯಾಬಾದ್​ ನಡುವಿನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ.

ದೆಹಲಿ ಹಾಗೂ ಗಾಜಿಯಾಬಾದ್​ನ ಕೆಲವು ಸ್ಥಳಗಳನ್ನು ಹಾಟ್​ಸ್ಪಾಟ್​ ಎಂದು ಗುರುತಿಸಿ ಸೀಲ್​ಡೌನ್​ ಮಾಡಿರುವ ಹಿನ್ನೆಲೆಯಲ್ಲಿ ಎರಡು ನಗರಗಳ ನಡುವಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಎರಡು ನಗರಗಳ ನಡುವೆ ಸಂಚಾರವನ್ನು ಸರ್ಕಾರ ನಿಷೇಧಿಸಿದ್ದರೂ ಸಾರ್ವಜನಿಕರು ಬೈಕ್​ ಹಾಗೂ ಇತರ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಸಂಚರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಜಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ.

ಎರಡು ನಗರಗಳಲ್ಲಿ ಮೇ.3ರವರೆಗೆ ಲಾಕ್​ಡೌನ್​ ನಿಯಮ ಮುಂದುವರೆಯಲಿದೆ. ಸೀಲ್​ಡೌನ್​ ಮಾಡಿರುವ ಪ್ರದೇಶಗಳಲ್ಲೂ ಕೂಡ ನಿಯಮ ಜಾರಿಯಲ್ಲಿರುತ್ತವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)