ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆ(Delhi Polls) ಅಖಾಡ ರಂಗೇರಿದೆ. ಭಾರತೀಯ ಜನತಾ ಪಕ್ಷವು ಚುನಾವಣೆಗೆ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಿಜೆಪಿ ಪರ್ವೇಶ್ ವರ್ಮಾ ಅವರನ್ನು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಎಎಪಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಸ್ಪರ್ಧಿಸಲಿದ್ದಾರೆ.
ಕರೋಲ್ ಬಾಗ್‌ನಿಂದ ದುಶ್ಯಂತ್ ಗೌತಮ್, ರಾಜೌರಿ ಗಾರ್ಡನ್‌ನಿಂದ ಮಂಜಿಂದರ್ ಸಿಂಗ್ ಸಿರ್ಸಾ, ಬಿಜ್ವಾಸನ್‌ನಿಂದ ಕೈಲಾಶ್ ಗೆಹ್ಲೋಟ್ ಮತ್ತು ಗಾಂಧಿನಗರದಿಂದ ಅರವಿಂದರ್ ಸಿಂಗ್ ಲವ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಆರ್‌ಕೆ ಪುರಂ ಕ್ಷೇತ್ರದಿಂದ ಅನಿಲ್ ಶರ್ಮಾ, ಮಾಳವೀಯ ನಗರದಿಂದ ಸತೀಶ್ ಉಪಾಧ್ಯಾಯ, ಮೆಹ್ರೌಲಿಯಿಂದ ಗಜೇಂದ್ರ ಯಾದವ್, ಛತ್ತರ್‌ಪುರದಿಂದ ಕರ್ತಾರ್ ಸಿಂಗ್ ತನ್ವಾರ್, ಅಂಬೇಡ್ಕರ್ ನಗರದಿಂದ ಖುಷಿರಾಮ್ ಚುನಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ.
ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರನ್ನು ಕಣಕ್ಕಿಳಿಸಿದ್ದಾರೆ. ಮುಖ್ಯಮಂತ್ರಿ ಅತಿಶಿ ವಿರುದ್ಧ ಕಲ್ಕಾಜಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕಿ ಅಲ್ಕಾ ಲಾಂಬಾ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದೆ. ಅಲ್ಕಾ ಕಾಂಗ್ರೆಸ್ ತೊರೆದು 2013 ರಲ್ಲಿ ಎಎಪಿ ಸೇರಿದರು ಮತ್ತು 2015ರಲ್ಲಿ ಚಾಂದಿನಿ ಚೌಕ್‌ನಿಂದ ಶಾಸಕರಾಗಿ ಆಯ್ಕೆಯಾದರು. ಆದರೆ 2019ರಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಸೇರಿದರು. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಚಾಂದಿನಿ ಚೌಕ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇಲ್ಲಿಯವರೆಗೆ ಕಾಂಗ್ರೆಸ್ 48 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಜಂಗ್‌ಪುರದಿಂದ ಫರ್ಹಾದ್ ಸೂರಿ ಅವರನ್ನು ಘೋಷಿಸಿದೆ. ಆದರೆ ಬಿಜೆಪಿ ಸರ್ದಾರ್ ತರ್ವಿಂದರ್ ಸಿಂಗ್ ಮರ್ವಾ ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ದೆಹಲಿಯ ಹೈಪ್ರೊಫೈಲ್‌ನ ಹೊಸದಿಲ್ಲಿ ಸೀಟ್‌ನಲ್ಲಿ ಸ್ಪರ್ಧೆ ಕುತೂಹಲಕಾರಿಯಾಗಿದೆ. ಒಂದೆಡೆ ಅರವಿಂದ್ ಕೇಜ್ರಿವಾಲ್‌ಗೆ ಸವಾಲೆಸೆಯಲು ಬಿಜೆಪಿ ಪ್ರವೇಶ್ ವರ್ಮಾ ಅವರನ್ನು ಕಣಕ್ಕಿಳಿಸಿದರೆ, ಮತ್ತೊಂದೆಡೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್‌ಗೆ ಕಾಂಗ್ರೆಸ್ ಅವಕಾಶ ನೀಡಿದೆ. ಹೀಗಿರುವಾಗ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.(ಏಜೆನ್ಸೀಸ್)