ನ್ಯೂಸ್

VIDEO | ಮೆಟ್ರೋದಲ್ಲಿ ಕಿತ್ತಾಡಿಕೊಂಡ ಯುವತಿಯರು!

ದೆಹಲಿ: ಮೆಟ್ರೋ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತದೆ. ಇದೀಗ ಮೆಟ್ರೋದ ಮಹಿಳಾ ಬೋಗಿಯಲ್ಲಿ ಇಬ್ಬರು ಯುವತಿಯರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಒಬ್ಬ ಯುವತಿ ಮತ್ತೊಬ್ಬ ಯುವತಿಗೆ ಶೂ ತೋರಿಸಿ ಬೆದರಿಸಿದ್ದಾಳೆ. ಈ ವೇಳೆ ಮತ್ತೊಬ್ಬಳು ಯುವತಿ ಕೈಯಲ್ಲಿದ್ದ ನೀರಿನ ಫ್ಲಾಸ್ಕ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಳೆ. ಸಹ ಪ್ರಯಾಣಿಕರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಇಬ್ಬರೂ ಜಗಳ ಮುಂದುವರಿಸಿದರು.

ಘಟನೆಯ ವಿಡಿಯೋ ತುಣುಕನ್ನು @DeepikaNarayanBhardwaj ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ದೆಹಲಿ ಮೆಟ್ರೋದಲ್ಲಿ ಫುಲ್ ಎಂಟರ್ ಟೈನ್ ಮೆಂಟ್ ಇದೆ' ಎಂಬ ಕಮೆಂಟ್‌ಗಳು ಬರುತ್ತಿವೆ.

ಮೆಟ್ರೋ ಅಧಿಕಾರಿಗಳು ಯಾವಾಗ ಮೆಟ್ರೋದಲ್ಲಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುತ್ತಾರೋ ಗೊತ್ತಿಲ್ಲ. ಆದರೆ ಅಲ್ಲಿಯವರೆಗೂ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ.