Delhi| ದೆಹಲಿ ಮೆಟ್ರೋದಲ್ಲಿ ಆಗಾಗ ನಿಯಮ ಉಲ್ಲಂಘನೆ ಮಾಡಿದ್ದಾಗಿ ಒಂದಲ್ಲಾ ಒಂದು ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂದಹಾಗೆ ಇದೀಗ ಯುವಕನೊಬ್ಬ ಮೆಟ್ರೋದ ಒಳಗೆ ಪ್ರಯಾಣಿಸುತ್ತಿದ್ದಾಗ ನಿಯಮವನ್ನೆಲ್ಲ ಗಾಳಿಗೆ ತೂರಿ ಮನಬಂದಂತೆ ವರ್ತಿಸಿದ್ದಾನೆ.
ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಎಣ್ಣೆ ಹೊಡೀತಾ, ಮೊಟ್ಟೆ ತಿನ್ನುತ್ತಾ ಪ್ರಯಾಣ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಟ್ರೋದಲ್ಲೇ ಎಣ್ಣೆ ಬಾಟಲಿ ಓಪನ್ ಮಾಡಿರೋ ಈತ ಮೊದಲಿಗೆ ಒಂದು ಪೆಗ್ ಕುಡಿದಿದ್ದಾನೆ. ನಂತರ ಪೆಗ್ ಮೇಲೆ ಪೆಗ್ ಎಂಬಂತೆ ಎಣ್ಣೆ ಹೊಡಿಯುತ್ತಾ ಮೊಟ್ಟೆ ತಿನ್ನುವ ಈತ, ಟ್ರೇನ್ನ ರಾಡ್ ಬಳಸಿ ಬಾಯಿಲ್ಡ್ ಎಗ್ನ ಸಿಪ್ಪೆ ಸುಲಿದಿದ್ದಾನೆ. ಜೊತೆಗೆ ಹಿರಿಯ ನಾಗರಿಕರು, ವಿಶೇಷ ಚೇತನರ ಸೀಟ್ನಲ್ಲಿ ಕುಳಿತು ಎಣ್ಣೆ ಹೊಡೆದಿದ್ದು, ದೆಹಲಿ ಮೆಟ್ರೋ ರೈಲಿನ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಹುಚ್ಚಾಟ ಮೆರೆದಿದ್ದಾನೆ.
ದೆಹಲಿ ಮೆಟ್ರೋದಲ್ಲಿ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು. ಅಲ್ಲಿನ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಮದ್ಯದ ಬಾಟಲಿಯನ್ನು ಒಯ್ಯುವುದಕ್ಕೆ ಅವಕಾಶ ಇದೆ. ಒಬ್ಬ ಗ್ರಾಹಕ ಸೀಲ್ ಆಗಿರುವ 2 ಬಾಟಲಿಗಳನ್ನು ಮೆಟ್ರೋದಲ್ಲಿ ಒಯ್ಯಬಹುದು.
ಇದನ್ನೂ ಓದಿ: ನೀವು ನಿಂತುಕೊಂಡು ನೀರು ಕುಡಿಯುತ್ತೀರಾ? ಹಾಗಿದ್ರೆ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ; Health
ಆದ್ರೆ ಮೆಟ್ರೋ ರೈಲಿನಲ್ಲಿ ಮದ್ಯವನ್ನ ಸೇವನೆ ಮಾಡುವಂತಿಲ್ಲ. ಮದ್ಯ ಸೇವಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡುವ ಹಾಗಿಲ್ಲ. ಜೊತೆಗೆ ಯಾವ ಪ್ರಯಾಣಿಕರೂ ಸಹ ದೆಹಲಿ ಮೆಟ್ರೋದಲ್ಲಿ ಊಟ, ಆಹಾರ ಸೇವನೆ ಮಾಡುವ ಹಾಗಿಲ್ಲ. ಈ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತದೆ.
(ಏಜೆನ್ಸೀಸ್)