ನವದೆಹಲಿ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಬಾತ್ರೂಮ್ ಮತ್ತು ಬೆಡ್ರೂಮ್ನಲ್ಲಿರುವ ಬಲ್ಬ್ಗಳಲ್ಲಿ ಸ್ಪ್ಯೆಕ್ಯಾಮರಾಗಳನ್ನು ಅಳವಡಿಸಿದ್ದ ಆರೋಪದ ಮೇಲೆ 30 ವರ್ಷ ವ್ಯಕ್ತಿಯನ್ನು ಶಕರ್‌ಪುರದಲ್ಲಿ ಬಂಧಿಸಲಾಗಿದೆ ಎಂದು ದೆಹಲಿ (Delhi) ಪೊಲೀಸರು ಮಂಗಳವಾರ (ಸೆಪ್ಟೆಂಬರ್ 24) ತಿಳಿಸಿದ್ದಾರೆ.
ಅಸಲಿಗೆ ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಒಂಟಿಯಾಗಿ ಶಕರ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದೇ ಕಟ್ಟಡ ಇನ್ನೊಂದು ಮಹಡಿಯಲ್ಲಿ ಮಾಲಿಕನ ಮಗ ಕರಣ್ ವಾಸವಾಗಿದ್ದಾನೆ. ಮಹಿಳೆ ತನ್ನ ಹುಟ್ಟೂರು ಉತ್ತರ ಪ್ರದೇಶಕ್ಕೆ ಹೋಗುವಾಗ ಕರಣ್ಗೆ ಮನೆ ಕೀಗಳನ್ನು ಕೊಟ್ಟು ಹೋಗಿದ್ದಾಳೆ. ಆ ಮಹಿಳೆಗೆ ಇತ್ತೀಚೆಗೆ ತನ್ನ ವಾಟ್ಸಾಪ್ ಖಾತೆಗೆ ಬಂದಿರುವ ಕೆಲವು ಲಿಂಕ್ಗಳನ್ನು ನೋಡಿದ್ದಾಳೆ. ಅದರಲ್ಲಿ ಅಪರಿಚಿತರ ಲ್ಯಾಪ್ಟಾಪ್ ಅನ್ನು ನೋಡಿದ್ದಾಗಿ ಬಳಿಕ ತಕ್ಷಣವೇ ಅಲ್ಲಿಂದ ಲಾಗ್ಔಟ್ ಆಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಾಟ್ಸಾಪ್ನಲ್ಲಿನ ಲ್ಯಾಪ್ಟಾಪ್ ನೋಡಿದ ಬಳಿಕ ಮಹಿಳೆಗೆ ತನ್ನನ್ನು ಯಾರೋ ಸ್ನೂಪ್ ಮಾಡುತ್ತಿದ್ದಾರೆ ಎಂಬ ಸಂಶಯ ಉಂಟಾಗಿದೆ. ಬಳಿಕ ತನ್ನ ಮನೆಯನ್ನು ತಲಾಶ್ ಮಾಡಿದ್ದಾರೆ. ಹೀಗೆ ಹುಡುಕಾಟ ನಡೆಸುವಾಗ ತನ್ನ ಬಾತ್ರೂಮ್ನ ಬಲ್ಟ್ ಹೋಲ್ಡರ್ನಲ್ಲಿ ಸ್ಪೈಕ್ಯಾಮರಾ ಅಳವಡಿಸಿರುವುದು ಕಂಡು ಬಂದಿದೆ. ತಕ್ಷಣವೇ ಆಕೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮಾಹಿತಿ ಬಂದ ತಕ್ಷಣವೇ ಮಹಿಳೆಯ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಮನೆಯಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಿದ್ದಾರೆ. ಆಗ ಆಕೆಯ ಬೆಡ್ರೂಮ್ನಲ್ಲಿರುವ ಬಲ್ಬ್ ಹೋಲ್ಡರ್ನಲ್ಲಿ ಮತ್ತೊಂದು ಕ್ಯಾಮರಾ ಅಳವಡಿಸಿರುವುದು ಪತ್ತೆಯಾಗಿದೆ.
ಇದಾದ ಬಳಿಕ ಮಹಿಳೆಯನ್ನು ಪೊಲೀಸರು ಬೇರೆಯಾದರೂ ಮನೆಗೆ ಬರುತ್ತಾರೆಯೇ ಎಂದು ಕೇಳಿದ್ದಾರೆ. ಆಗ ಆಕೆ ಇಲ್ಲ ಯಾರು ಬರುವುದಿಲ್ಲ, ಆದರೆ ತಾನು ಊರಿಗೆ ಹೋಗುವಾಗ ಮನೆಯ ಕೀಯನ್ನು ಮನೆ ಮಾಲೀಕರ ಮಗ ಕರಣ್ ಬಳಿ ನೀಡುವುದಾಗಿ ಹೇಳಿದ್ದಾಳೆ. ಆರೋಪಿ ಕರಣ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸತ್ಯಾಂಶ ಹೊರಬಂದಿದೆ. 3 ತಿಂಗಳ ಹಿಂದೆ ಆಕೆ ಹುಟ್ಟೂರಿಗೆ ಹೋಗಿದ್ದಾಗ ತನ್ನ ಬಳಿ ಮನೆಯ ಕೀಯನ್ನು ಕೊಟ್ಟು ಹೋಗಿದ್ದಳು. ಆ ಅವಕಾಶವನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮೂರು ಸ್ಪೈಕ್ಯಾಮರಾಗಳನ್ನು ಖರೀದಿಸಿ, ಅವಳ ಮಲಗುವ ಕೋಣೆಯಲ್ಲಿ ಒಂದನ್ನು ಮತ್ತು ಅವಳ ಸ್ನಾನಗೃಹದಲ್ಲಿ ಒಂದನ್ನು ಅಳವಡಿಸಿದ್ದಾಗಿ ಕರಣ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆನ್ಲೈನ್ನಲ್ಲಿ ಈ ಕ್ಯಾಮರಾಗಳ ಕಾರ್ಯನಿರ್ವಹಿಸಲಾಗುವುದಿಲ್ಲ. ರೆಕಾರ್ಡ್ ಆಗುವ ದೃಶ್ಯಗಳು ಮೆಮೊರಿ ಕಾರ್ಡ್ಗಳಲ್ಲಿ ಸಂಗ್ರಹವಾಗುತ್ತದೆ. ಹೀಗಾಗಿಯೇ ಕರಣ್ ಮಹಿಳೆಯ ಬಳಿ ವಿದ್ಯುತ್ ರಿಪೇರಿ ನೆಪದಲ್ಲಿ ಪದೇಪದೆ ಕೀಯನ್ನು ಕೇಳುತ್ತಿದ್ದನ್ನು. ಬಳಿಕ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ತನ್ನ ಲ್ಯಾಪ್‌ಟಾಪ್‌ಗೆ ಕಳುಹಿಸಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.
ಕರಣ್‌ನಿಂದ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸಂಗ್ರಹಿಸಿದ್ದ ಒಂದು ಸ್ಪೈ ಕ್ಯಾಮರಾ ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಕಲಾಂಗ ವ್ಯಕ್ತಿಯಾಗಿರುವ 30 ವರ್ಷದ ಆರೋಪಿ ಕರಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)