ಮನಾಲಿ: ಹೋಟೆಲ್ವೊಂದರಲ್ಲಿದ್ದ ಪತ್ನಿ ಹಾಗೂ ಪ್ರಿಯಕರನ ಮೇಲೆ ಗುಂಡು ಹಾರಿಸಿದ ವ್ಯಕ್ತಿ, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ.
ಪ್ರಿಯಕರನ ಜತೆ ಮನಾಲಿ ಪ್ರವಾಸಕ್ಕೆಂದು ಪತ್ನಿ ಬಂದಿರುವ ಬಗ್ಗೆ ಮಾಹಿತಿ ತಿಳಿದ ದೆಹಲಿ ಮೂಲದ ವ್ಯಕ್ತಿ, ಗನ್ ತೆಗೆದು ತಾನೂ ಮನಾಲಿ ಪ್ರವಾಸ ಕೈಗೊಂಡಿದ್ದಾನೆ. ಇಬ್ಬರು ಇರುವ ಹೋಟೆಲ್ ಮಾಹಿತಿಯನ್ನು ಪಡೆದುಕೊಂಡಿದ್ದಾನೆ.
ಶುಕ್ರವಾರ ಬೆಳಗ್ಗೆಯೇ ಇಬ್ಬರು ಇರುವ ಕೊಠಡಿಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆಕೆಯ ಪ್ರಿಯಕರ ಸಾವನ್ನಪ್ಪಿದ್ದು, ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇತ್ತ ವ್ಯಕ್ತಿಯೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗುತ್ತಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮನಾಲಿ ಡಿಎಸ್ಸಿ ಹೇಮ್ ರಾಜ್ ವರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್)