ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ 2022ರಲ್ಲಿ ಭಾರತದ ಅತಿ ಮಾಲಿನ್ಯ ನಗರವೆಂಬ ದಾಖಲೆಗೆ ಒಳಗಾಗಿದೆ. ಸುರಕ್ಷಿತ ಮಟ್ಟಕ್ಕಿಂತ ಅಧಿಕ ಮತ್ತು ಮೂರನೇ ಅತಿ ಹೆಚ್ಚು ಸರಾಸರಿಯೊಂದಿಗೆ ದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಂಕಿ-ಅಂಶದ ವಿಶ್ಲೇಷಣೆಯಿಂದ ದೃಢಪಟ್ಟಿದೆ.
ಪಿಎಂ 2.5 ಎಂದರೇನು?: 2.5 ಮೈಕ್ರಾನ್ಗಿಂತ ಕಡಿಮೆ ಗಾತ್ರದ ಚಿಕ್ಕ ಕಣಗಳು. ಅದು ಶ್ವಾಸಕೋಶಗಳು ಹಾಗೂ ರಕ್ತವನ್ನು ಪ್ರವೇಶಿಸಿ ಹಾನಿ ಉಂಟು ಮಾಡುತ್ತವೆ.
- ಕಳೆದ ನಾಲ್ಕು ವರ್ಷಗಳಲ್ಲಿ ದೆಹಲಿಯಲ್ಲಿ ಪಿಎಂ 2.5 ಮಾಲಿನ್ಯ ಶೇಕಡ 7ಕ್ಕಿಂತ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ. 2019ರಲ್ಲಿ ತಲಾ ಕ್ಯೂಬಿಕ್ ಮೀಟರ್ನಲ್ಲಿ ಇದ್ದ 108 ಮೈಕ್ರೋಗ್ರಾಮ್ 2022ರಲ್ಲಿ 99.71ಕ್ಕೆ ಇಳಿದಿದೆ ಎಂದು ಎನ್ಸಿಎಪಿ ಟ್ರಾ್ಯಕರ್ ವರದಿ ತಿಳಿಸಿದೆ. ಆದರೂ ಅದು ಕೂಡ ಅಪೇಕ್ಷಿತ ಮಟ್ಟಕ್ಕಿಂತ ಕೆಳಗೇ ಇದೆ.
- 2017ರ ಮಟ್ಟಕ್ಕೆ ಹೋಲಿಸಿದರೆ 2024ರ ಹೊತ್ತಿಗೆ ಮಾಲಿನ್ಯವನ್ನು ಶೇಕಡ 20ಕ್ಕೆ ಇಳಿಸುವುದು ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್ಸಿಎಪಿ) ಗುರಿ.
- 2019 ಜನವರಿ 10ರಂದು ಕೇಂದ್ರ ಸರ್ಕಾರದಿಂದ ಎನ್ಸಿಎಪಿಗೆ ಚಾಲನೆ.
- 102 ನಗರಗಳಲ್ಲಿ ಮಾಲಿನ್ಯ ಮಟ್ಟ ಇಳಿಸುವುದು ಅದರ ಉದ್ದೇಶ.
- ಈಗ ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ಸಾಧನೆ ಮಾಡದ ಎಂದು ಕರೆಯಲಾಗುವ 131 ನಗರಗಳಿವೆ. ಅವುಗಳು 2011-15ರ ಅವಧಿಯಲ್ಲಿ ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ಸ್