Phansi Ghar: ದೆಹಲಿ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಕೆಳಗಿರುವ ಭೂಗತ ಕೋಣೆಗಳು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಆಮ್ಆದ್ಮಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ನಿಗೂಢ ಕೊಠಡಿಗಳು ಮತ್ತು ರಹಸ್ಯ ಸುರಂಗದಲ್ಲಿ ಇದ್ದಿದ್ದಾದರು ಏನು? ಇದೆಲ್ಲ ವಿವಾದದ ಬಗ್ಗೆ ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರು ಹೇಳೊದೇನು? ಎಂಬುದರ ಸಂಬಂಧಪಟ್ಟ ಮಾಹಿತಿ ಇಲ್ಲಿದೆ..
ಆಮ್ಆದ್ಮಿ ವಾದವೇನು..?
ದೆಹಲಿ ವಿಧಾನಸಭೆಯ ಕೆಳಗಿರುವ ಭೂಗತ ಕೋಣೆಗಳು ಒಂದು ಕಾಲದಲ್ಲಿ ಕೆಂಪು ಕೋಟೆಗೆ ಸಂಪರ್ಕ ಹೊಂದಿದ ಗಲ್ಲು ಶಿಕ್ಷೆ ನೀಡುವ ಸ್ಥಳವಾಗಿತ್ತು ಎಂದು ಹಿಂದಿನ ಎಎಪಿ ಸರ್ಕಾರದ ಹೇಳಿದೆ.
ಇದನ್ನೂ ಓದಿ:ಪಠ್ಯದೊಂದಿಗೆ ಕ್ರೀಡೆಗೆ ಆದ್ಯತೆ ನೀಡಿ
ಬಿಜೆಪಿ ಹೇಳೋದೇನು.?
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರ ಆಪ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಆ ಜಾಗವು ಬ್ರಿಟಿಷ್ ಆಳ್ವಿಕೆಯಲ್ಲಿ ತಿಂಡಿ ವಿತರಿಸಲು ಬಳಸಲಾಗುತ್ತಿದ್ದ ಮೆಟ್ಟಿಲುಗಳನ್ನು ಮಾತ್ರ ಹೊಂದಿತ್ತು ಎಂದು ಪ್ರತಿಪಾದಿಸಿದೆ.
ಈ ಎರಡು ಕೋಣೆಗಳ ಬಗ್ಗೆ ಸರ್ಕಾರ ಮತ್ತು ವಿಪಕ್ಷಗಳಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅಲ್ಲಿ ನಿಜವಾಗಿಯೂ ಗಲ್ಲು ಶಿಕ್ಷೆಯಾದ್ದಾಗಿತ್ತೇ? ಅಥವಾ ಇಲ್ಲಿನ ಸುರಂಗ ನಿಜವಾಗಿಯೂ ಕೆಂಪು ಕೋಟೆಗೆ ಕರೆದೊಯ್ಯುತ್ತದೆಯೇ? ದೆಹಲಿ ವಿಧಾನಸಭಾ ಕಟ್ಟಡಕ್ಕೆ ಭಯಾನಕ ಹಿನ್ನಲೆ ಏನಾದರೂ ಇದೆಯೇ? ತಿಳಯೋಣ..
2021‘ರಲ್ಲಿ ಎಎಪಿ ಆಡಳಿತ ನಡೆಸುತ್ತಿದ್ದ ವೇಳೆ, ದೆಹಲಿ ವಿಧಾನಸಭೆಯ ಆಗಿನ ಸ್ಪೀಕರ್ ರಾಮ್ ನಿವಾಸ್ ಗೋಯಲ್, ವಿಧಾನಸಭೆಯ ಕೆಳಗಿರುವ ಕೋಣೆಗಳು ಬ್ರಿಟಿಷ್ ಆಳ್ವಿಕೆಯಲ್ಲಿ ಫಾನ್ಸಿ ಘರ್ (ಗಲ್ಲುಗಂಬ) ಆಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಿಕೊಂಡಿದ್ದರು. ಅವರ ಹೇಳಿಕೆಯ ಪ್ರಕಾರ, ಕೆಂಪು ಕೋಟೆಗೆ ಸಂಪರ್ಕ ಹೊಂದಿದ ಭೂಗತ ಸುರಂಗವು ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಸಾಗಿಸಲು ಬ್ರಿಟಿಷರು ಬಳಸುತ್ತಿದ್ದರು ಎನ್ನಲಾಗಿದೆ.
ಆಪ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಗೋಯೆಲ್ ಮಾಧ್ಯಮಗಳಿಗೆ, ಸುರಂಗದ ಪ್ರವೇಶದ್ವಾರವನ್ನು ತೋರಿಸುತ್ತಾ, ಭೂಗತ ಕೋಣೆಗಳು ಮತ್ತು ಅದರ ಇತಿಹಾಸದ ಬಗ್ಗೆ ವಿವರಣೆ ನೀಡಿ, ಸದ್ಯ ಆಧುನಿಕ ನಿರ್ಮಾಣದ ಕಾರ್ಯಗಳಿಂದಾಗಿ ಸುರಂಗ ಮಾರ್ಗವು ಮುಚ್ಚಿಹೋಗಿದ್ದು, 2022ರ ಜನವರಿ 26 ರೊಳಗೆ ಅಥವಾ ಮುಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಸಿಗರ ಭೇಟಿಗೆ ಮುಕ್ತವಾಗಲಿವೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರದ ಪ್ರತಿನಿಧಿಗಳು ಈ ಹೇಳಿಕೆಗಳು ಆಧಾರರಹಿತವೆಂದು ತಳ್ಳಿಹಾಕಿದೆ. ಸದನದಲ್ಲಿ ಮಾತನಾಡಿದ ಸಿಎಂ, ಅಂದಿನ ಕೇಜ್ರಿವಾಲ್ ಸರ್ಕಾರ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಸಾಂಕೇತಿಕ ಜೈಲು ಬಾರ್‌ಗಳನ್ನು ನಿರ್ಮಿಸಿ, ಒಂದೆರಡು ಕುಣಿಕೆಗಳನ್ನು ಇರಿಸಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿಚಿತ್ರಗಳನ್ನು ಅಂಟಿಸಿ, ಕೊಠಡಿಗಳನ್ನು ಜೈಲಿನಂತೆ ಮಾಡಲು 1 ಕೋಟಿ ರೂ.ಗಳನ್ನು ವ್ಯಯ ಮಾಡುವ ಮೂಲಕ ಇತಿಹಾಸವನ್ನು ಸಂಪೂರ್ಣ ವಿರೂಪಗೊಳಿಸಿ ಹುತಾತ್ಮರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದೆ.ಈ ವಿಷಯದ ಕುರಿತು ತನಿಖೆಯನ್ನು ಪ್ರಾರಂಭಿಸಿ, ಎಫ್‌ಐಆರ್ ದಾಖಲಿಸಲು ಆದೇಶಿಸಿಸಲಾಗಿದೆ ಎಂದು ವರದಿಯಾಗಿದೆ.
ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಗುರುವಾರ(ಆಗಸ್ಟ್7) ಈ ವಿಷಯದ ಬಗ್ಗೆ ಮಾತನಾಡಿದ್ದು, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಬಂಧಪಟ್ಟ ಇತರರನ್ನು ವಿಚಾರಣೆಗೆ ಒಳಪಡಿಸುವ ಹಕ್ಕುಸ್ವಾಮ್ಯ ಸಮಿತಿಗೆ ಶಿಫಾರಸು ಮಾಡಲಾಗುವುದು ಎಂದರು.
ದೆಹಲಿ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಫನ್ಸಿ ಘರ್ ಅಥವಾ ಸುರಂಗದ ಅಸ್ತಿತ್ವದ ಕುರಿತಾದ ಹೇಳಿಕೆಗಳ ಬಗ್ಗೆ ಇಲ್ಲಿಯವರೆಗೂ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಮಾಡುವಂತೆ ಯಾವುದೇ ಸರ್ಕಾರ ಕೇಳಿಲ್ಲ. ಹಿಂದಿನ ಸರ್ಕಾರದ ನಿಲುವು ಊಹಾಪೋಹವಾಗಿದ್ದು, ಭಾರತೀಯ ಪುರಾತತ್ವ ಸಮೀಕ್ಷೆ ಅಥವಾ ದೆಹಲಿ ರಾಜ್ಯ ಪುರಾತತ್ವ ಇಲಾಖೆಯ ಸಂಪೂರ್ಣ ಪರೀಕ್ಷೆಯ ನಂತರ ಸತ್ಯ ಬಹಿರಂಗವಾಗುವು ಎಂದರು.(ಏಜೆನ್ಸೀಸ್)