ಕೊಪ್ಪಳ ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ದಢೇಸುಗುರ ಮಾತನಾಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಗೀತಾ ಮುತ್ತಾಲ, ಗಣೇಶ ಹೊರ್ತಟ್ನಾಳ ಇತರರಿದ್ದರು. 
ನ್ಯೂಸ್

ಡ್ಯಾಂ ಗೇಟ್​ ಅಳವಡಿಕೆ ವಿಳಂಬ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷ ದಡೆಸ್ಗೂರ ಆಕ್ರೋಶ
  • ಪಕ್ಷಾತಿತ ಪಾದಯಾತ್ರೆ ಎಚ್ಚರಿಕೆ
ಕೊಪ್ಪಳ : ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಜೀವಾಳವಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಸುವಲ್ಲಿ ವಿಳಂಬ ವಾಗುತ್ತಿದೆ. ಮಳೆಗಾಲ ಆರಂಭವಾಗುವ ಮೊದಲೇ ಕೆಲಸ ಮುಗಿಯದಿದ್ದರೆ ಪಕ್ಷಾತಿತವಾಗಿ ಬೃಹತ್​ ಪಾದಯಾತ್ರೆ ನಡೆಸಲಾಗುವುದು,ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗುರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮಾರ್ಚ್​ ವೇಳೆಗೆ ಎಲ್ಲಾ ಗೇಟ್​ಗಳ ಅಳವಡಿಕೆ ಪೂರ್ಣಗೊಳ್ಳಲಿದೆ ಎಂದು ಬರೀ ಹೆಸರಿಗಷ್ಟೇ ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಕೇವಲ 4 ಕ್ರಸ್ಟ್​ ಗೇಟ್​ಗಳನ್ನು ಮಾತ್ರ ಅಳವಡಿಸಲಾಗಿದೆ. ಕಾಮಗಾರಿ ಸ್ಥಳದಲ್ಲಿ ಕೇವಲ 8 ಜನ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಕೆಲಸ ಮುಂದುವರಿದರೆ ಮುಂದಿನ ವರ್ಷವೂ ಕಾಮಗಾರಿ ಮುಗಿಯುವುದಿಲ್ಲ. ಏಪ್ರಿಲ್​-ಮೇ ನಲ್ಲಿ ಮುಂಗಾರು ಮಳೆ ಆರಂಭವಾದರೆ ಗೇಟ್​ ಅಳವಡಿಸಲು ಸಾಧ್ಯವಿಲ್ಲ ಎಂದರು.
ಸದನದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದರೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ, ಬೀಡುಗಡೆಯಾದ ಹಣವನ್ನು ಸಹ ಹಿಂದಕ್ಕೆ ಪಡೆಯಲಾಗುತ್ತಿದೆ. ಕಾಂಗ್ರೆಸ್​ ಸರ್ಕಾರ ತಮ್ಮೊಳಗಿನ ಗುದ್ದಾಟದಲ್ಲಿ ಮುಳುಗಿದ್ದು. ಸಾರ್ವಜನಿಕರನ್ನು ಮತ್ತು ರೈತರನ್ನು ಮರೆತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರದ ದಾಹದಲ್ಲಿ ತೇಲುತ್ತಿದ್ದಾರೆ. ಇದೇ ರೀತಿ ರ್ನಿಲಕ್ಷ್ಯ ಮುಂದುವರಿದರೆ, ಮುಂದಿನ 2028ರ ಚುನಾವಣೆಯಲ್ಲಿ ರೈತರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಮಳೆಗಾಲ ಆರಂಭವಾಗುವಷ್ಟರಲ್ಲಿ ಗೇಟ್​ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದರೆ, ಕಾರಟಗಿ ಭಾಗದ ಎಲ್ಲಾ ರೈತ ಮುಖಂಡರೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ, ಗೀತಾ ಮುತ್ತಾಲ, ಗಣೇಶ ಹೊರ್ತಟ್ನಾಳ ಮತ್ತು ಇತರರಿದ್ದರು.