ನ್ಯೂಸ್

ದೋಷಪೂರಿತ ನಂಬರ್ ಪ್ಲೇಟ್; 241 ವಾಹನ ಮಾಲೀಕರಿಗೆ ದಂಡ

ಬೆಂಗಳೂರು: ಏಕಮುಖ ಸಂಚಾರ ಮತ್ತು ದೋಷಪೂರಿತ ನಂಬರ್ ಪ್ಲೇಟ್ ವಿರುದ್ಧ ಪಶ್ಚಿಮ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 525 ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರ, ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಶ್ಚಿಮ ಸಂಚಾರ ವಿಭಾಗ ಪೊಲೀಸರು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದರು.

284 ಏಕಮುಖ ಸಂಚಾರ ಮಾಡಿದ ವಾಹನ ಚಾಲಕ/ ಸವಾರರ ವಿರುದ್ಧ ಹಾಗೂ 241 ದೋಷಪೂರಿತ ನಂಬರ್ ಪ್ಲೇಟ್ ವಾಹನಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಚಾಲಕ, ಸವಾರರಿಗೆ ದಂಡ ವಿಧಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಅರಿವು ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.